ಹೂವಿನಹಡಗಲಿ: ಪ್ರತಿಯೊಬ್ಬರೂ ಸಹಕಾರ ಮನೋಭಾವದಿಂದ ಬಾಳುವುದರ ಜತೆಗೆ ಪರಸ್ಪರ ನೆರವಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಮತ್ತು ಮಹಾವೀರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸಹಕಾರ ಮನೋಭಾವ ಇದ್ದರೆ ಸಮಾಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಕಾಣಲು ಸಾಧ್ಯ. ಆತ್ಮ ವಿಶ್ವಾಸದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಮಗೆ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಮಹಾವೀರ ಸಹಕಾರಿ ಸಂಘ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತ 25 ವರ್ಷ ಪೂರ್ಣಗೊಳಿಸಿ ರಜತಮಹೋತ್ಸ ಆಚರಿಸಿಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ: ಶೀಘ್ರ ಮನೆ ವಿತರಿಸಲು ಪಿಡಿಒಗಳಿಗೆ ಶಾಸಕ ತಾಕೀತು
ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ಮಾತನಾಡಿ, ತಂತ್ರಜ್ಞಾನದ ಬಳಕೆ ಹೆಚ್ಚಾದ ಕಾರಣದಿಂದಾಗಿ ಮನುಷ್ಯನ ಮಾನಸಿಕ ಸ್ಥಿತಿ ನಿಯಂತ್ರಣದಲ್ಲಿ ಇಲ್ಲದಂತಾಗಿದೆ. ಜೈನಮುನಿ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಹಣದ ಆಸೆ ಕೈಗೆ ನಮ್ಮ ಬುದ್ಧಿ ನೀಡದೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬೇಕಾಗಿದೆ ಎಂದರು. ಸಂಘದ ಅಧ್ಯಕ್ಷ ಮಂಜುನಾಥ ಜೈನ್ ಮಾತನಾಡಿದರು. ಸಂಘದ ಕಾನೂನು ಸಲಹೆಗಾರ ಎಸ್.ಟಿ.ಜೋಷಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯಶೋಧರ ಗೌಡ, ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂವೀರ ಸ್ವಾಮೀಜಿ, ಸಹಕಾರ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಪ್ರಭಾರ ವ್ಯವಸ್ಥಾಪಕ ಭರತೇಶ ಜೋಶಿ ಇತರರಿದ್ದರು.