More

    ಶೀಘ್ರ ಮನೆ ವಿತರಿಸಲು ಪಿಡಿಒಗಳಿಗೆ ಶಾಸಕ ತಾಕೀತು

    ಚಿತ್ರದುರ್ಗ: ಅಲೆಮಾರಿ,ಯಾದವ ಸಮುದಾಯದ ಬಡವರಿಗೆ ಮಂಜೂರಾಗಿರುವ 973 ಮನೆಗಳನ್ನು ಶೀಘ್ರ ನಿರ್ಮಿಸಿ ವಿತರಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಕಚೇರಿಯಲ್ಲಿ ಶನಿವಾರ ವಸತಿ ಯೋಜನೆ ಪ್ರಗತಿ ಪರಿಶೀಲಿಸಿ ಮಾತನಾಡಿ,ಬಸವ ವಸತಿ ಯೋಜನೆಯಡಿ ಒಂದು ಗ್ರಾಪಂಗೆ 20 ಮನೆಗಳು ಮಂಜೂರಾಗಿದ್ದು,ಫಲಾನುಭವಿಗಳಿಗೆ ಶೀಘ್ರದಲ್ಲೇ ಮನೆಗಳು ಹಂಚಿಕೆಯಾಗಬೇಕೆಂದರು.

    ಒಂದು ಮನೆಯೂ ಲ್ಯಾಪ್ಸ್ ಆಗಬಾರದು. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ಮಂಜೂರು ಮಾಡಿಸುವೆ. ತಾಂತ್ರಿಕ ಸಮಸ್ಯೆ ಗಳಿದ್ದರೆ ಗಮನಕ್ಕೆ ತೆಗೆದುಕೊಂಡು ಬನ್ನಿ,ಆದರೆ ವಸತಿ ಸವಲತ್ತಿನಿಂದ ಅರ್ಹ ಬಡವರು ವಂಚಿತರಾಗಬಾರದು.ಪಿಡಿಒಗಳು ಚುರುಕಾಗಿ ಕೆಲಸ ಮಾಡ ಬೇಕೆಂದರು. ಅರ್ಜಿ ಸಲ್ಲಿಸಿದವರಿಗೆ ಎಲ್ಲರಿಗೂ ಮನೆಗಳನ್ನು ಕೊಡುತ್ತಿದ್ದೇವೆ. ಆಕಸ್ಮಿಕವಾಗಿ ಯಾರದಾದರೂ ಕೈ ತಪ್ಪಿ ಹೋಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಕೈಬಿಟ್ಟು ಹೋದವರನ್ನು ಗುರುತಿಸಿ ಮನೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಪಂ ಚುನಾವಣೆ ನೀತಿ ಸಂಹಿತೆ ಘೋಷಣೆಯೊಳಗೆ ಮನೆಗಳ ಹಂಚಿಕೆ ಪೂರ್ಣಗೊಳಿಸ ಬೇಕೆಂದ ಶಾಸಕರು, ಜಾನುಕೊಂಡ ಕುಡಿವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಆರಾಧನ ಸಮಿತಿ ಸಭೆ: ಇದೇ ಸಂದರ್ಭದಲ್ಲಿ ಆರಾಧನ ಸಮಿತಿ ಸಭೆ ನಡೆಸಿದ ಶಾಸಕರು, ಸೊಂಡೆಕೊಳ, ಭೀಮಸಮುದ್ರ, ಎಂ.ಕೆ.ಹಟ್ಟಿ, ಡಿ.ಎಸ್.ಹಳ್ಳಿ, ಗೊಡ ಬನಹಾಳ್, ಜೆ.ಎನ್.ಕೋಟೆ, ಇಂಗಳದಾಳ್, ಸಿದ್ದಾಪುರ, ಗೋನೂರು, ಮದಕರಿಪುರ ಸೇರಿ 15 ಗ್ರಾಮಗಳ ದೇವಾಲಯಗಳ ದುರಸ್ತಿ ಗೆ ಸೂಚಿಸಿದರು. ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು,ಇಒ ಎಚ್.ಕೃಷ್ಣನಾಯ್ಕ, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ,ಇಂಜಿನಿಯರ್ ಭಾರತಿ, ಸಮಿತಿ ಸದಸ್ಯರಾದ ಎನ್.ಮಂಜುನಾಥ್, ವೀಣಾ, ಕೆ.ಎನ್.ರಾಜಣ್ಣ, ಲಕ್ಷ್ಮೀಸಾಗರದ ರಾಜಣ್ಣ ಹಾಗೂ ನಾನಾ ಗ್ರಾಪಂಗಳ ಪಿಡಿಒಗಳಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts