ಮಾನ್ವಿ ಅಕ್ಷರ ದಾಸೋಹ ನೌಕರರ ಸಂಘಟನೆಯಿಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜಗೆ ಮನವಿ ಸಲ್ಲಿಸಿದರು.ಸಂಘಟನೆ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ, ಖಜಾಂಚಿ ಗಂಗು ಪ್ರಮುಖರಾದ ರೇಖಾ, ಲಕ್ಷ್ಮೀ, ಹುಲಿಗೆಮ್ಮ, ಈರಮ್ಮ, ವಿಜಯಲಕ್ಷ್ಮೀ, ಸರಸ್ವತಿ, ಸೂಗಮ್ಮ ಸುಲ್ತಾನ ಇನ್ನಿತರರು ಇದ್ದರು. 
ಜಿಲ್ಲೆ

ಅಡುಗೆ ನೌಕರರಿಂದ ಪ್ರತಿಭಟನೆ ನಾಳೆ

Kopala - Desk - Eraveni

ಮಾನ್ವಿ: ಬಿಸಿಯೂಟ ತಯಾರಿಸುವ ಅಡುಗೆದಾರರಿಂದ ಜು.15ರಂದು ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆಯಿಂದ ದಾಸೋಹ ಸಹಾಯಕ ನಿರ್ದೇಶಕ ಬಸವರಾಜಗೆ ಶನಿವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷೆ ತೇರೇಸಾ ಮಾತನಾಡಿ, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆದಾರರಿಗೆ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿಲ್ಲ. ವೇತನ ಹೆಚ್ಚಳ ಮಾಡಿ, ನಿವೃತ್ತಿ ಹೊಂದುತ್ತಿರುವವರಿಗೆ ಹಾಗೂ ಹೊಂದಿದವರಿಗೆ ಇಡುಗಂಟು ಜಾರಿ ಮಾಡಬೇಕು.

ಅಡುಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು ಸೇರಿ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.