ಯಲಬುರ್ಗಾದಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಜನರು ನೆನೆಯುತ್ತಾ ಹೋಗುತ್ತಿರುವ ದೃಶ್ಯ ಕಂಡುಬಂತು. 
ಜಿಲ್ಲೆ

ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

ಯಲಬುರ್ಗಾ: ಪಟ್ಟಣ ಸೇರಿ, ತಾಲೂಕಿನಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತೀಚೆಗೆ ಬಿತ್ತನೆಗೊಂಡ ಬೆಳೆಗಳಲ್ಲಿ ಕಳೆ ಹೆಚ್ಚುತ್ತಿದೆ.

ಹೆಸರು, ಅಲಸಂಧೆ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಗೆ ಮಳೆ ಸಹಕಾರಿಯಾಗಲಿದೆ. ಮಳೆಯಿಂದಾಗಿ ನಾಲೆ, ಹಳ್ಳ, ರೈತರ ಜಮೀನಲ್ಲಿರುವ ಬದು, ಕೃಷಿಹೊಂಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ.

ಇದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಲಿದೆ. ನಿರಂತರ ಮಳೆಯಿಂದ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ಛತ್ರಿ ಸಹಾಯದಿಂದ ತೆರಳುತ್ತಿರುವುದು ಸಾಮಾನ್ಯವಾಗಿದೆ.