ಜಿಲ್ಲೆ

ಜಿಲ್ಲೆಯ ವಿದ್ಯುದಾಗಾರಗಳಲ್ಲಿ ನಿರಂತರ ವಿದ್ಯುತ್ ಉತ್ಪಾದನೆ


ಕಾರವಾರ:ಕಾಳಿ ಹಾಗೂ ಶರಾವತಿಯ ನದಿಯ ಪ್ರಮುಖ ಜಲಾಶಯಗಳು ಭರ್ತಿಯಾಗಿರುವುದರಿಂದ ಇದೇ ಯೋಜನೆಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಗ್ರಿಡ್‌ಗೆ ಹರಿಬಿಡಲಾಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಾಗಿದೆ.

ಸೋಮವಾರ ಕಾಳಿ ಜಲ ವಿದ್ಯುತ್ ಯೋಜನೆಯ ನಾಗಝರಿ, ಕೊಡಸಳ್ಳಿ, ಕದ್ರಾ, ಹಾಗೂ ಸೂಪಾ ಅಣೆಕಟ್ಟೆಗಳಿಂದ ಒಟ್ಟು 18.829 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಯಿತು. ಭಾನುವಾರ 17.5843 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಕದ್ರಾ, ಕೊಡಸಳ್ಳಿ, ಸೂಪಾ ವಿದ್ಯುದಾಗಾರಗಳ ಎಲ್ಲ ಟರ್ಬೈನ್‌ಗಳಿಗೆ ಏಕ ಕಾಲದಲ್ಲಿ ಕೆಲಸ ನೀಡಲಾಗುತ್ತಿದೆ.

ತಿಂಗಳ ಗುರಿಯನ್ನು 15 ದಿನದಲ್ಲಿಯೇ ಮುಗಿಸಲಾಗಿದೆ. ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಸಲ್ಲಿಸುವ ಬೇಡಿಕೆಯ ಆಧಾರದ ಮೇಲೆ ಬೆಂಗಳೂರಿನ ಲೋಡ್ ಡಿಸ್‌ಪ್ಯಾಚ್ ಸೆಂಟರ್‌ನಿAದ ಎಲ್ಲೆಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.