ಜಿಲ್ಲೆ

ದೈವೇಚ್ಛೆ, ನಿಷ್ಕಳಂಕ ಮನಸ್ಸಿನಿಂದ ಕಾರ್ಯ ಯಶಸ್ಸು : ಬಂಟ್ವಾಳ ತಾ.ಪಂ. ವಾಜಿ ಅಧ್ಯಕ್ಷ ಯಶವಂತ ದೇರಾಜೆ ಅಭಿಪ್ರಾಯ

ಉಳ್ಳಾಲ: ನಾನು ಎನ್ನುವುದು ನಗಣ್ಯ. ಯಾವುದೇ ಕೆಲಸ ತನ್ನಿಂದ ಆಯಿತು ಎನ್ನುವ ಭಾವನೆ ಅನಗತ್ಯ. ಒಂದು ಎಲೆ ಅಲ್ಲಾಡಬೇಕಾದರೂ ಗಾಳಿ ಬರಬೇಕು. ನಿಷ್ಕಳಂಕ ಮನಸ್ಸು, ದೈವೇಚ್ಛೆ ಅಗತ್ಯ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಯಶವಂತ ದೇರಾಜೆ ಅಭಿಪ್ರಾಯಪಟ್ಟರು.

ಕೊಣಾಜೆ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ಭವನ ಮಂದಿರದ ಅರ್ಚಕರಿಗೆ ವಿಶ್ರಾಂತಿ ಮತ್ತು ನೈವೇದ್ಯ ತಯಾರಿಕಾ ಕೊಠಡಿ ಕೆಲಸಕ್ಕೆ ಗುರುವಾರ ಚಾಲನೆ ನೀಡಿ ವಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ವಾತನಾಡಿ, ಐದು ಗ್ರಾಮಗಳನ್ನೊಳಗೊಂಡ ಸಂ 1980ರಲ್ಲಿ ಸ್ಥಾಪನೆಗೊಂಡು, ಸವಾಜದ ಸಾವಾಜಿಕ, ಆರ್ಥಿಕ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರ ಸೇವೆ ಸಲ್ಲಿಸುತ್ತಿದೆ. ಕ್ಷೇತ್ರಕ್ಕೆ ಅಗತ್ಯವಿದ್ದ ಅರ್ಚಕರ ಭವನ ಮತ್ತು ನೈವೇದ್ಯ ಕೊಠಡಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಡಿ. 25ರಂದು ನಾರಾಯಣ ಗುರುಗಳ ನೂತನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭ ನೂತನವಾಗಿ ನಿರ್ವಾಣ ಆಗಲಿರುವ ನಾರಾಯಣ ಗುರುಗಳ ಪಂಚಲೋಹದ ವಿಗ್ರಹದ ವೀಳ್ಯ ನೀಡಲಾಯಿತು.

ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಪ್ರಧಾನ ಅರ್ಚಕ ಗಂಗಾಧರ ಶಾಂತಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಮುಖ್ಯ ಅರ್ಚಕ ದೇವಪ್ಪ ಶಾಂತಿ, ಅರ್ಚಕ ಜನಾರ್ದನ ಶಾಂತಿ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ಪ್ರಧಾನ ಕಾರ್ಯದರ್ಶಿ ಸುಭಾಷ್ ಧರ್ಮನಗರ, ವಾಜಿ ಅಧ್ಯಕ್ಷ ಲಕ್ಷ್ಮ್ಮಣ ಕೋಟ್ಯಾನ್, ಗಂಗಾಧರ ವಾಸ್ಟರ್, ನಾರಾಯಣ ಪೂಜಾರಿ, ಕೋಶಾಧಿಕಾರಿ ಸುರೇಶ್ ಪಿ.ಪೂಜಾರಿ ಹರೇಕಳ, ರಮೇಶ್ ಮರ್ಕಮೆ ಪುರುಷೋತ್ತಮ ಬಂಗೇರ, ಕೊಣಾಜೆ ಗ್ರಾಮಚಾವಡಿ ಯುವವಾಹಿನಿ ಅಧ್ಯಕ್ಷ ಹರೀಶ್ ಪೂಜಾರಿ, ಸಮಿತಿ ಸದಸ್ಯರಾದ ಜನಾರ್ದನ ಕೋಟ್ಯಾನ್, ಯಶೋಧರ ಆಂಚನ್, ಸರಿತಾ ರವೀಂದ್ರ ಬಂಗೇರ, ಚಂದ್ರಹಾಸ ಅಮೀನ್ ಹರೇಕಳ, ಶಿಲ್ಪಿ ಬೆನ್ನಿ ಆರ್.ಪನಿಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಯುವವಾಹಿನಿ ಪ್ರಧಾನ ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು.