ಜಿಲ್ಲೆ

ಸಂವಿಧಾನ ಕಾನೂನು ರಕ್ಷಿಸುವ ಸಾಧನ : ಜೋಯ್ಸ ಸಬೀನಾ ಲೋಬೊ ಬಣ್ಣನೆ

ಸೌಮ್ಯ ಆರ್

ಉಪ್ಪಿನಂಗಡಿ: ಸಾರ್ವಭೌಮತೆ, ಸ್ವಾತಂತ್ರೃ, ಸಮಾನತೆ, ಮೌಲ್ಯಗಳ ಆಧಾರದ ಮೇಲೆ ಸಂವಿಧಾನವನ್ನು ಅಂಗೀಕರಿಸಲಾಗಿದ್ದು, ರಾಜಕೀಯ ವ್ಯವಸ್ಥೆ ಅಂವಿಧಾನಿಕ ಮೌಲ್ಯಗಳ ಮೇಲೆ ಸ್ಥಿರವಾಗಿದೆ. ಸಂವಿಧಾನ ದೇಶದ ಮೂಲಭೂತ ಕಾನೂನುಗಳನ್ನು ರಕ್ಷಿಸುತ್ತಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಜೋಯ್ಸ ಸಬೀನಾ ಲೋಬೊ ಹೇಳಿದರು.

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐ.ಕ್ಯು.ಎ.ಸಿ ಸಂಚಾಲಕ ಬಾಲಾಜಿ ಎಂ.ಪಿ. ಮಾಹಿತಿ ನೀಡಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಕೇಶವ ಕುಮಾರ್ ಬಿ. ಹಾಗೂ ಉಪನ್ಯಾಸಕರಾದ ಡಾ.ದೇವರಾಜ್ ಆರ್, ಡಾ.ಸಂತೋಷ್ ಎಚ್.ಎಸ್, ಮಂಜುನಾಥ ಬಿ.ಆರ್, ಮಹೇಶ್ ಕುಮಾರ್ ಕೆ.ಎಸ್, ತೇಜಸ್ವಿ ಹಾಗೂ ಶ್ವೇತಾ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್. ಸ್ವಾಗತಿಸಿದರು. ಸ್ವಯಂಸೇವಕ ಹೇಮಚಂದ್ರ ವಂದಿಸಿದರು. ಸ್ವಯಂಸೇವಕಿ ಹಿತಶ್ರೀ ಕಾರ್ಯಕ್ರಮ ನಿರೂಪಿಸಿದರು.