ಪುತ್ತೂರು ಗ್ರಾಮಾಂತರ: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಅವರಿಗೆ ಬೆಂಬಲ ನೀಡುವ ಕಾರ್ಯ ಪಕ್ಷದ ನಾಯಕರಿಂದ ಆಗಬೇಕು. ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾರ್ಯಕರ್ತರಿಗೆ ಹುರಿದುಂಬಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಪಕ್ಷದ ಪ್ರಮುಖ ಸಭೆ, ಮಾಸಿಕ ಸಭೆಗಳು ಗ್ರಾಮೀಣ ಭಾಗದ ಕಾರ್ಯಕರ್ತರ ಮನೆಯಲ್ಲಿ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರ್ ಉಜಿರೋಡಿ ಅವರ ಮನೆಯಲ್ಲಿ ನಡೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಒಳಮೊಗ್ರು ವಲಯ ಕಾಂಗ್ರೆಸ್ ಉಸ್ತುವಾರಿಯಾದ ಪುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಮಾತನಾಡಿದರು.
ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಕ್ಷೇತ್ರ ಯುವಕ ಕಾಂಗ್ರೆಸ್ ಅಧ್ಯಕ್ಷ ಾರೂಕ್ ಪೆರ್ನೆ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರ್ ಉಜಿರೋಡಿ, ಕಾಂಗ್ರೆಸ್ ಮುಖಂಡರಾದ ಶಶಿಕಿರಣ್ ರೈ ನೂಜಿಬೈಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ನೂರುದ್ದೀನ್ ಸಾಲ್ಮರ, ಗ್ರಾಪಂ ಸದಸ್ಯರಾದ ಚಿತ್ರಾ, ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಸುಂದರಿ, ಮಹಮ್ಮದ್ ಬೊಳ್ಳಾಡಿ, ಇಸುಬು ಅಡ್ಕ, ರಶೀದ್, ನಾಸಿರ್ ಯು.ಕೆ., ಬೂತ್ ಅಧ್ಯಕ್ಷ ಚೆನ್ನ, ಅಝೀಝ್, ಮುನೀರ್, ಮಹಮ್ಮದ್ ಅಡ್ಕ, ಹಂಝ ಮತ್ತಿತರರಿದ್ದರು.
ಕಾಂಗ್ರೆಸ್‌ಗೆ ಸೇರ್ಪಡೆ
ಬಿಜೆಪಿ ಕಾರ್ಯಕರ್ತರಾಗಿದ್ದ ಬಾಳಪ್ಪ ನಾಯ್ಕ ಮುಡಾಲಮೂಲೆ, ಕೊರಗಪ್ಪ ನಾಯ್ಕ, ದೇವಪ್ಪ ನಾಯ್ಕ, ಶಿವಪ್ಪ ನಾಯ್ಕ, ಜಯಂತಿ, ಜಯಂತಿ ದೇವಪ್ಪ ನಾಯ್ಕ, ವೇದಾವತಿ, ಶಿವಪ್ಪ ನಾಯ್ಕ, ಜಯ, ಧನಂಜಯ, ದಿನೇಶ್, ದಯಾನಂದ, ವಿಶ್ವನಾಥ ಕುಲಾಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಅಶೋಕ್‌ಕುಮಾರ್ ರೈ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.