ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿರುವ ಹಿನ್ನೆಲೆ ದೆಹಲಿಗೆ ಬರುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.
ಸೋಮವಾರ ರಾಜ್ಯ ನಾಯಕರು ಒಟ್ಡಾಗಿ ತೆರಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್, ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಧ್ರುವ ನಾರಾಯಣ್ ದೆಹಲಿಗೆ ತೆರಳುವ ಪಟ್ಟಿಯಲ್ಲಿದ್ದಾರೆ.
ಅಭ್ಯರ್ಥಿ ಆಯ್ಕೆ, ಚುನಾವಣಾ ರಣತಂತ್ರ ಕುರಿತು ಹೈಕಮಾಂಡ್ ಮಹತ್ವದ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ನಾಯಕರ ಬಸ್ ಯಾತ್ರೆ, ಪಕ್ಷ ಸಂಘಟನೆ ಸೇರಿ ಹಲವು ಮಹತ್ವದ ವಿಚಾರಗಳನ್ನ ಚರ್ಚೆ ನಡೆಯುವುದು. ಗುಜರಾತ್ ಸೋಲು ಹಾಗೂ ಹಿಮಾಚಲ ಗೆಲುವನ್ನು ಆಧರಿಸಿ ಕರ್ನಾಟಕದ ಚುನಾವಣಾ ಯೋಜನೆ ಸಿದ್ಧವಾಗುವುದು ಎಂದು ತಿಳಿದುಬಂದಿದೆ.