ಪುತ್ತೂರಲ್ಲಿ ಶನಿವಾರ ಚುನಾವಣಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿದರು.  
ಜಿಲ್ಲೆ

ಕಾಂಗ್ರೆಸ್‌ನ ಸಾಧನೆ ಜನರಿಗೆ ತಿಳಿಸುವ ಕಾರ್ಯವಾಗಲಿ : ಪುತ್ತೂರಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ

Avinash R

ಪುತ್ತೂರು: ಗ್ಯಾರಂಟಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ನಡೆಸುತ್ತಾ ಬಂದಿದೆ. ಯಾವತ್ತೂ ಕಾಂಗ್ರೆಸ್ ಅಪಪ್ರಚಾರ, ಸುಳ್ಳು ವಿಚಾರಗಳ ಹರಡಲೇ ಇಲ್ಲ. ಅದಕ್ಕೆ ಆಸ್ಪದವನ್ನು ನೀಡುವುದಿಲ್ಲ. ನೈಜ ವಿಚಾರವನ್ನು ಜನರಿಗೆ ತಲುಪಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳು ಬಹಳಷ್ಟಿದ್ದು, ಜನರಿಗೆ ತಿಳಿಸುವ ಕೆಲಸ ಸಮರ್ಥವಾಗಿ ಆಗಬೇಕಿದೆ ಎಂದು ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.

ಪುತ್ತೂರಲ್ಲಿ ಶನಿವಾರ ನಡೆದ ಚುನಾವಣಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕ ಅಶೋಕ್‌ಕುಮಾರ್ ರೈ, ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕೆಪಿಸಿಸಿ ಸದಸ್ಯ ಐ.ಜಿ. ಚಿನ್ನಪ್ಪ, ಸಾಮಾಜಿಕ ಜಾಲತಾಣ ರಾಜ್ಯ ವಕ್ತಾರೆ ಶೈಲಜಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಕಾಶ್ ಪಾಣಾಜೆ, ಸಿದ್ದೀಕ್ ಸುಲ್ತಾನ್, ಮುರಳೀಧರ್ ರೈ ಮಠಂತಬೆಟ್ಟು, ವಿಕ್ರಮ್ ರೈ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಪೂರ್ಣೇಶ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸಿನ ಸಾಮಾಜಿಕ ಜಾಲತಾಣ ಅಧ್ಯಕ್ಷ ಅಬ್ಬು ನವಗ್ರಾಮ, ಸಾಮಾಜಿಕ ಜಾಲತಾಣ ಉಸ್ತುವಾರಿ ನವೀನ್ ಚೆಲ್ಯಡ್ಕ ಉಪಸ್ಥಿತರಿದ್ದರು.