ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಾರ್ಯಕರ್ತರು, ನೂತನ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಿ, ಪ್ರತಿಯೊಬ್ಬ ಕಾರ್ಯಕರ್ತ, ಕೃಷಿಕರಿಗೆ ಸೊಸೈಟಿಯಿಂದ ಉತ್ತಮ ಸ್ಪಂದನೆ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸಹಕಾರಿ ರಂಗದಲ್ಲಿ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತೀಯ ಅಭ್ಯರ್ಥಿಗಳ ಪರವಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಜೋಯೇಲ್ ಮೆಂಡೋನ್ಸ್ ಅಧ್ಯಕ್ಷತೆ ವಹಿಸಿ ಕೃತಜ್ಞತೆ ಸಲ್ಲಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ತುಂಗಪ್ಪ ಎಂ.ಬಂಗೇರ, ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಎಂ.ಪಾರೆಂಕಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಸೀತರಾಮ ಬೆಳಾಲು, ವಸಂತಿ ಮಚ್ಚಿನ, ಮಡಂತ್ಯಾರು ಗ್ರಾಪಂ ಅಧ್ಯಕ್ಷೆ ರೂಪಾ ನವೀನ್ ಕೊಡ್ಲಕ್ಕೆ, ಚುನಾವಣಾ ಪ್ರಭಾರಿ ಪದ್ಮನಾಭ ಅರ್ಕಜೆ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಕಾಂತಪ್ಪ ಗೌಡ ಹಟ್ಟತ್ತೋಡಿ, ನಿರ್ದೇಶಕರಾದ ಧನಲಕ್ಷ್ಮೀ, ಅಮಿತಾ ಪ್ರಿಯಾ ಲೋಬೋ, ಮಹಾಬಲ ಕೆ., ಸುರೇಶ್, ಗೋಪಾಲಕೃಷ್ಣ ಕೆ, ಗಣೇಶ್, ಚುನಾವಣೆಯಲ್ಲಿ ಸ್ಪರ್ಧಿಸಿದ ಪುಷ್ಪರಾಜ್ ಜೈನ್, ಪುರುಷೋತ್ತಮ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖರಾದ ರಾಜೇಶ್, ಶೈಲೇಶ್ ಪುಳಿಮಜಲು, ದಿನೇಶ್ ಕರ್ಕೇರ ಸೋಣಂದೂರು ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು. ಕಿಶೋರ್ ಎಚ್.ಪೂಜಾರಿ ನಿರೂಪಿಸಿದರು.