ಜಿಲ್ಲೆ

ಜ್ಞಾನಸುಧಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಇಂದಿರಾ ಎನ್ ಕೆ

ಕಾರ್ಕಳ: ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್‌ಇಂಡಿಯಾ ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್‌ಟೆಸ್ಟ್) ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

ಮುಖ್ಯ ಅತಿಥಿಯಾಗಿ ಉಡುಪಿ ಸಿ.ಎ ಮಹೇಂದ್ರ ಶೆಣೈ ಪಿ. ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಸಾಧಕ ವಿದ್ಯಾರ್ಥಿಗಳಾದ ರಕ್ಷಾ ರಾಮಚಂದ್ರ, ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್., ಪ್ರಜನ್, ಅಜಯ್ ಡಿ.ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್.ಶೆಟ್ಟಿ, ವಿಘ್ನೇಶ್, ಕೆ.ಅಂಕಿತಾ ಪೈ, ಪ್ರೇರಣಾ ಸುನೀಲ್ ಕುಮಾರ್, ಸಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾ ಹಮ್ರಾ, ಕಾವ್ಯ ಸೆಲ್ಲಾ ಮುತು, ರಾಜೇಂದ್ರ ಎನ್.ಮಲ್ಯ, ಶುಧಿನ್ ಶೆಟ್ಟಿ, ಸುಭೀತ್, ಸುವೀಕ್ಷಾ, ವಿಶ್ವಾಸ್ ನಾಯ್ಕ ಮತ್ತು ಯಶಸ್ವಿನಿ ಸೇರಿದಂತೆ 28 ವಿದ್ಯಾರ್ಥಿಗಳ ಸಹಿತ ಪಾಲಕರನ್ನು ಗೌರವಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸಿ.ಎ ನಿತ್ಯಾನಂದ ಪ್ರಭು, ಸಂಸ್ಥೆಯ ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರ್, ಉಪ ಪ್ರಾಂಶುಪಾಲ ಶ್ರೀಸಾಹಿತ್ಯ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಮಿಥುನ್ ಯು., ವಿದ್ಯಾರ್ಥಿ ವ್ಯವಹಾರಗಳ ಡೀನ್ ಶಕುಂತಳಾ ಎಂ.ಸುವರ್ಣ, ಜೆಇಇ ಸಂಯೋಜಕ ಸಂದೀಪ, ಸಂಸ್ಥೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ವಕೀಲ ಭವಿಷ್ ಕುಂದರ್, ಹಿತೈಷಿಗಳಾದ ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಸುಮಿತ್ರಾ, ವ್ಯವಹಾರ ಅಧ್ಯಯನ ಉಪನ್ಯಾಸಕ ಶೈಲೇಶ್ ಶೆಟ್ಟಿ, ಸಂಖ್ಯಾಶಾಸ್ತ್ರ ಉಪನ್ಯಾಸಕ ಮಂಜುನಾಥ್ ಮುದೂರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.