ಕಾರ್ಕಳ: ಬೈಲೂರು ಸಮೀಪದ ಯರ್ಲಪಾಡಿ ಸರ್ಕಾರಿ ಸಂಯುಕ್ತ ಪ್ರೌಢಶಾಲಾ 2024-25ನೇ ಸಾಲಿನ ಪ್ರಾರಂಭೋತ್ಸವದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಿಗೆ ಬಲೂನು, ಲೇಖನ ಪರಿಕರ ನೀಡಿ ಸ್ವಾಗತಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನರಂಗ ಕುಲಾಲ್, ದಿನೇಶ್ ಪೂಜಾರಿ ದೀಪ ಬೆಳಗಿಸಿದರು. ಶಾಲೆಗೆ ಪ್ರಥಮ, ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಎಲ್ಲ ವಿದ್ಯಾರ್ಥಿಗಳಿಗೆ ರಾಮಾಯಣ ಸಿರಿ ಪುಸ್ತಕ ನೀಡಿ ಕಮಲಾಕ್ಷ ಕಾಮತ್ ಅಭಿನಂದಿಸಿದರು.
ಎಸ್‌ಡಿಎಂಸಿ ಸದಸ್ಯ ಕೆ.ಅನಂತ ಪಟ್ಟಾಭಿ ರಾವ್, ಅವರ ಪತ್ನಿ, ಯರ್ಲಪಾಡಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಪ್ರಸನ್ನ ಕುಮಾರಿ ವಿದ್ಯಾರ್ಥಿಗಳಿಗೆ ಬಹುಮಾನ, ಕಸಾಪ ಕಾಪು ವತಿಯಿಂದ ಕನ್ನಡ ಶಾಲು ನೀಡಿ ಅಭಿನಂದಿಸಿದರು. ಎನ್‌ಎಂಎಂಎಸ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿ ಸೂರಜ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸುನಂದಾ ಎಲ್.ಎಸ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಹೇಮಲತಾ ವಂದಿಸಿದರು. ಶಿಕ್ಷಕಿ ಜ್ಯೋತಿ ನಿರೂಪಿಸಿದರು. ಶಿಕ್ಷಕಿ ಇಂದಿರಾ, ಚೇತನಾ ಪರಿಚಯಿಸಿದರು.