ಶಂಕರಶರ್ಮ ಕುಳಮರ್ವ ಅವರನ್ನು ಕಸಾಪ ಕೇರಳ ಗಡಿನಾಡ ಘಟಕದ ವತಿಯಿಂದ ಅಭಿನಂದಿಸಲಾಯಿತು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಜಯದೇವ ಖಂಡಿಗೆ ಮೊದಲಾದವರಿದ್ದರು. 
ಜಿಲ್ಲೆ

ಶಂಕರಶರ್ಮ ಕುಳಮರ್ವಗೆ ಕಸಾಪ ಅಭಿನಂದನೆ

ಸೌಮ್ಯ ಆರ್

ಕಾಸರಗೋಡು: ಉತ್ತರಕಾಂಡ ಕಾವ್ಯಧಾರೆ ಮತ್ತು ಕುಮಾರೇಶ್ವರ ಚರಿತ್ರೆ ಭಾಮಿನಿ ಷಟ್ಪದಿ ಖಂಡಕಾವ್ಯಗಳ ಕರ್ತೃ ಶಂಕರಶರ್ಮ ಕುಳಮರ್ವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಭಿನಂದಿಸಿದರು.

ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಪಾದೇಕಲ್ಲು ವಿಷ್ಣುಭಟ್, ವಿಶ್ರಾಂತ ಪ್ರಾಂಶುಪಾಲ ಬೇ.ಸಿ. ಗೋಪಾಲಕೃಷ್ಣ, ಶಿಕ್ಷಕಿ ಶೈಲಜಾ ಬಿ., ನಿವೃತ್ತ ಶಿಕ್ಷಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಪರಿಷತ್ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಸಾಹಿತಿ ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯಶಿಕ್ಷಕ ಶ್ಯಾಮಪ್ರಸಾದ ಕುಳಮರ್ವ ವಂದಿಸಿದರು.