ಬೆಳ್ತಂಗಡಿ: ಬಂದಾರು ಗ್ರಾಮ ಮೈರೋಳ್ತಡ್ಕ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದ ಆದೇಶಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ ಶಾಸಕ ಹರೀಶ್ ಪೂಂಜಗೆ ಶಾಸಕರ ಕಚೇರಿ ಶ್ರಮಿಕದಲ್ಲಿ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು.
ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ ನಿರುಂಬುಡ, ಸಮಿತಿ ಪದಾಧಿಕಾರಿಗಳಾದ ಪುಷ್ಪಾ, ಹರಿಣಾಕ್ಷಿ, ಸವಿತಾ, ಜ್ಯೋತಿ, ಶ್ರೀಧರ ಗೌಡ ಕುಂಬುಡಂಗೆ, ಕೃಷ್ಣಪ್ಪ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಡೊಂಬಯ್ಯ ಗೌಡ ಖಂಡಿಗ, ಬಾಬು ಗೌಡ ಮಡ್ಯಲಕಂಡ, ನಿರಂಜನ ಗೌಡ ನಡುಮಜಲು, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮೋಹನ್ ಗೌಡ ಗುಂಡಿಖಂಡ, ಮನೋಜ್ ಗೌಡ ನಾವುಳೆ, ಮೋಹನ್ ಬಂಗೇರ, ಗಿರೀಶ್ ಗೌಡ ಬಿ.ಕೆ. ಉಪಸ್ಥಿತರಿದ್ದರು.