ಲಿಂಗಸುಗೂರು: ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ತಾಲೂಕಿನಲ್ಲಿ ಕಳೆದ ಎರಡು ವರ್ಷದಲ್ಲಿ 1.87 ಕೋಟಿ ಸಲ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಹೇಳಿದರು.
ಇದನ್ನೂ ಓದಿ:ಕೊಡಗಿನಲ್ಲಿ ಶಕ್ತಿ ಯೋಜನೆಗೆ ಹಿನ್ನಡೆ
ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೊಜನೆ ಸಂಭ್ರಮಾಚರಣೆ ನಿಮಿತ್ತ ಸೋಮವಾರ ಮಹಿಳೆಯರಿಗೆ ಸಿಹಿ ಹಂಚಿ ಮಾತನಾಡಿದರು. 2023ರ ಜೂ.11ರಿಂದ ಈವರೆಗೆ ಶಕ್ತಿ ಯೋಜನೆಯಡಿ 1.87 ಕೋಟಿ ಟಿಕೆಟ್ ಉಚಿತವಾಗಿ ಪಡೆದು ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರತಿ ದಿನ ಸುಮಾರು 24 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ಸಾರಿಗೆ ಘಟಕಕ್ಕೆ 9.56 ಲಕ್ಷ ರೂ. ಆದಾಯ ಬರುತ್ತಿದೆ. ಈ ಯೋಜನೆ ಪೂರ್ವದಲ್ಲಿ 118 ಅನುಸೂಚಿಗಳಿದ್ದವು. ನಂತರ 131 ಆಗಿದ್ದು, ಒಟ್ಟು 13 ಅನುಸೂಚಿಗಳು ಹೆಚ್ಚಾಗಿವೆ ಎಂದರು.
ಡಿಪೋ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇ ಹೆಸರೂರು, ಪುರಸಭೆ ಸದಸ್ಯ ಮಹ್ಮದ ರಫಿ, ಸಂಜೀವಪ್ಪ ಹುನಕುಂಟಿ, ಗದ್ದೆನಗೌಡ ಪೊಲೀಸ್ ಪಾಟೀಲ್, ಶಾಂತಾ ಮುದಗಲ್ಲ ಇತರರಿದ್ದರು.