ಅಳವಂಡಿ ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಡಾ.ಜ್ಯೋತಿ, ಡಾ.ಕವಿತಾ, ಡಾ.ಸುಕಾಂತ್, ಪ್ರತಾಪಗೌಡ, ತಾರಾ ಇತರರಿದ್ದರು. 
ಜಿಲ್ಲೆ

ಸಮಗ್ರ ಬೇಸಾಯ ಪದ್ಧತಿ ಅನುಸರಿಸಿ

Kopala - Desk - Eraveni

ಅಳವಂಡಿ: ರೈತರು ಒಂದೇ ಬೆಳೆ ಬೆಳೆಯದೆ ಸಮಗ್ರ ಕೃಷಿ ಪದ್ಧತಿ ಅನುಸರಿಸಬೆಕು. ಜತೆಗೆ ಜೇನು, ಕೋಳಿ, ಕುರಿ ಸಾಕಣೆ ಮಾಡಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞೆ ಡಾ.ಜ್ಯೋತಿ ತಿಳಿಸಿದರು.

ಸಮೀಪದ ಹಿರೇಸಿಂದೋಗಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಕೇಂದ್ರ ದೆಹಲಿ, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಕೃಷಿ ಇಲಾಖೆ ಕೊಪ್ಪಳದಿಂದ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಸೋಮವಾರ ಮಾತನಾಡಿದರು.

ಗೃಹವಿಜ್ಞಾನಿ ಡಾ.ಕವಿತಾ ಉಳ್ಳಿಕಾಶಿ ಮಾತನಾಡಿ, ರೈತರು ಬೆಳೆದಂತಹ ಬೆಳೆಯನ್ನು ಮೌಲ್ಯವರ್ಧನೆ ಮಾಡುವುದರಿಂದ ಕೃಷಿಯನ್ನು ಇನ್ನಷ್ಟು ಲಾಭದಾಯಕ ಮಾಡಬಹುದು. ರೈತ ಮಹಿಳೆಯರು ಅಣಬೆ ಬೇಸಾಯ, ಎರೆಹುಳ ಸಾಕಣೆ ಮತ್ತು ಮಿನಿ ಎಣ್ಣೆಗಾಣ, ದಾಲ್ಮಿಲ್, ಹಿಟ್ಟಿನ ಗಿರಣಿ ಮುಂತಾದ ಉಪ ಕಸುಬು ಮಾಡಬಹುದು ಎಂದರು.

ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರು ಮಾತನಾಡಿ, ಬಿತ್ತುವ ಮುನ್ನ ಬೀಜೋಪಚಾರ ಮಾಡಿ. ಬೀಜೋಪಚಾರ ಮಾಡಲು ಟ್ರೈಕೋಡರ್ಮಾ, ರೈಸೋಬಿಯಂ, ಸ್ಪೆರ್ಲಮ್ ಅಜಟೋಬ್ಯಾಕ್ಟರ್ ದ್ರಾವಣವನ್ನು ಪ್ರತಿ ಎಕರೆಗೆ 200ಗ್ರಾಂ. ಬಳಸಬೇಕು. ರೈತರು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ರಸಗೊಬ್ಬರ ಬಳಸಬೇಕು. ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಪಶು ಸಂಗೋಪನೆ ವಿಜ್ಞಾನಿ ಡಾ.ಸುಕಾಂತ್ ಮಂಡಲ್, ಆತ್ಮ ಯೋಜನೆಯ ಅಧಿಕಾರಿ ತಾರಾ, ಜಲಾನಯನ ಇಲಾಖೆಯ ಸಹಾಯಕರಾದ ವೆಂಕಟೇಶ ಹಳೆಮನೆ, ಸಂತೋಷ, ಸುರೇಶ ವಾಸ್ತಿ, ಮುದಿಯಪ್ಪ ಬಾರಕೇರ, ಕೃಷಿ ಸಖಿಯರಾದ ಮಲ್ಲಮ್ಮ ಕಾತರಕಿ, ಶಿಲ್ಪಾ, ಕಾವೇರಿ ಇತರರಿದ್ದರು.