ಜಿಲ್ಲೆ

ಯುವಜನತೆ ಒಗ್ಗಟ್ಟಿನಿಂದ ಸಮುದಾಯದ ಬೆಳವಣಿಗೆ

ಇಂದಿರಾ ಎನ್ ಕೆ

ಆರ್ಡಿ: ಯುವಜನತೆಯಲ್ಲಿ ಒಗ್ಗಟ್ಟು ಸಾಮರಸ್ಯ ಸಾಮಾಜಿಕ ಕಾಳಜಿಯಿಂದ ಸಮುದಾಯದ ಬೆಳವಣಿಗೆ ಸಾಧ್ಯ ಎಂದು ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.

ಅಲ್ಬಾಡಿ ಕೂಸಿನತೋಟ ಶ್ರೀ ನಾಗಬ್ರಹ್ಮ ಯುವ ಸಂಘಟನೆ ವತಿಯಿಂದ ನೊಂದ ಜೀವಕ್ಕೆ ನೆರವಿನ ಹಸ್ತ ಪ್ರಯುಕ್ತ ಕುಡುಬಿ ಕೂಡುಕಟ್ಟು ಸಮಾಜದ ಹೊನಲು ಬೆಳಕಿನ ಲೀಗ್ ಮಾದರಿ ಹಗ್ಗ ಜಗ್ಗಾಟ ಸ್ಪರ್ಧೆ ನಾಗಬ್ರಹ್ಮ ಟ್ರೋಫಿ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಅಲ್ಬಾಡಿ ಕೂಸಿನತೋಟ ಶ್ರೀನಾಗಬ್ರಹ್ಮ ಯುವ ಸಂಘಟನೆ ಅಧ್ಯಕ್ಷ ಅಲ್ಬಾಡಿ ಚಿತ್ತೇರಿಮನೆ ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಿದರು. ಉದ್ಯಮಿ ದೇವಣ್ಣ ನಾಯ್ಕ ತೂಂಬಿನಕೆರೆ, ಅಲ್ಬಾಡಿ ಬುಕ್ಕಿಗುಡ್ಡೆ ಉದ್ಯಮಿ ಚಂದ್ರ ನಾಯ್ಕ ಅಲ್ಬಾಡಿ, ಅಲ್ಬಾಡಿ ಗುಡ್ಡಿಮನೆ ದಿನಕರ ಶೆಟ್ಟಿ, ಕೊಂಜಾಡಿ ಕಲ್ಮರ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಗೋಳಿಯಂಗಡಿ, ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹೆರಿಯಣ್ಣ ನಾಯ್ಕ, ಸಹ ಶಿಕ್ಷಕಿ ಸುಕನ್ಯಾ, ಉದ್ಯಮಿ ದಿನೇಶ್ ಬರೆಗದ್ದೆ, ಅಲ್ಬಾಡಿ ಗುಡ್ಡಿಮನೆ ಜಯರಾಮ ಶೆಟ್ಟಿ, ಅಲ್ಬಾಡಿ 9ನೇ ಮೈಲ್‌ಕಲ್ಲು ಭಗತ್ ಸಿಂಗ್ ಫ್ರೆಂಡ್ಸ್ ಅಧ್ಯಕ್ಷ ರವಿ ನಾಯ್ಕ, ಉದ್ಯಮಿ ಪ್ರಸಾದ್ ತೊನ್ನಾಸೆ,ದೇವು ನಾಯ್ಕ ಕೂಸಿನತೋಟ, ಅಲ್ಬಾಡಿ ಕೂಸಿನತೋಟ ಶ್ರೀನಾಗಬ್ರಹ್ಮ ಯುವ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ನಾರ್ತ್ ಈಸ್ಟ್ ಎಸ್‌ಎಸ್‌ಬಿ ಶಸ್ತಸ್ತ್ರ ಸಿಮಾಬಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ನಾಯ್ಕ ಅಲ್ಬಾಡಿ, ಅಗ್ನಿಶಾಮಕ ಸಿಬ್ಬಂದಿ ಅಲ್ಬಾಡಿ ಚಿತ್ತೇರಿಮನೆ ಕೃಷ್ಣ ನಾಯ್ಕ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಪ್ರತಿಮಾ ಕೂಸಿನತೋಟ, ಕ್ರೀಡಾಪಟು ಚಂದನ್ ಕೂಸಿನತೋಟ ಅವರನ್ನು ಸನ್ಮಾನಿಸಲಾಯಿತು. ಭರತ್ ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ ಆರ್ಡಿ ಕಾರ್ಯಕ್ರಮ ನಿರೂಪಿಸಿದರು

ಫಲಿತಾಂಶ

ಪುರುಷರ ವಿಭಾಗ ಪ್ರಥಮ ಗೆಳೆಯರ ಬಳಗ ಕಲ್ಮನೆ, ದ್ವಿತೀಯ ಕಜ್ಕೆ ಫ್ರೆಂಡ್ಸ್ ಮುದ್ರಬೈಲ್, ತೃತೀಯ ಶ್ರೀ ಚಾಮುಂಡೇಶ್ವರಿ ಫ್ರೆಂಡ್ಸ್ ಯಡ್ತಾಡಿ. ಮಹಿಳೆಯರ ವಿಭಾಗ ಪ್ರಥಮ ಕಲ್ಮನೆ ಫ್ರೆಂಡ್ಸ್ ಕಲ್ಮನೆ, ದ್ವಿತೀಯ ಎಂ.ಕೆ. ಫ್ರೆಂಡ್ಸ್ ಕಲ್ಮರ್ಗಿ, ತೃತೀಯ ಕ್ಯಾದಿಕೆರೆ ಫ್ರೆಂಡ್ಸ್ ಕ್ಯಾದಿಕೆರೆ, ಸಮಸ್ತ ಸಮಾಜ ಬಾಂಧವರ ವಿಭಾಗ ಪ್ರಥಮ ರಾಹುತ್ ಆದ್ರಿ ನೈಲಾಡಿ, ದ್ವಿತೀಯ ಅಲ್ಬಾಡಿ ಶ್ರೀ ನಾಗಬ್ರಹ್ಮ ಯುವ ಸಂಘಟನೆ ಕೂಸಿನತೋಟ.