ಕಾರ್ಕಳದ ಎಸ್‌ವಿಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘವನ್ನು ತರಬೇತುದಾರ ರಾಜೇಂದ್ರ ಭಟ್.ಕೆ ಉದ್ಘಾಟಿಸಿದರು.  
ಜಿಲ್ಲೆ

ಓದಿನಿಂದ ಭಾಷೆಯೊಂದಿಗೆ ಸಂವಹನ ಸುಲಭ

ಇಂದಿರಾ ಎನ್ ಕೆ

ಕಾರ್ಕಳ: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ ಎಂದು ಶಿಕ್ಷಕ, ವಿಕಸನದ ರಾಷ್ಟ್ರಮಟ್ಟದ ತರಬೇತುದಾರ ರಾಜೇಂದ್ರ ಭಟ್ ಕೆ. ಹೇಳಿದರು.

ಕಾರ್ಕಳದ ಎಸ್‌ವಿಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯೆ ಪ್ರೊ.ಉಷಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘ ನಿರ್ದೇಶಕಿ ವಿನುತಾ ಕಾಮತ್ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಶ್ರೇಯಾ ಮತ್ತು ರಕ್ಷಾ ಉಪಸ್ಥಿತರಿದ್ದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.