ಕಾರ್ಕಳ: ತಾಲೂಕಿನ ಕರಿಯಕಲ್ಲು ನಿವಾಸಿ ಸುಂದರ(65) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಅವರು ಮನೆಯಿಂದ ಹೊರ ಹೋದವರು ವಾಪಸ್ ಬಾರದೇ ಇದ್ದು, ಮನೆಯವರು ಎಲ್ಲ ಕಡೆ ಹುಡುಕಾಡಿದಾಗ ಕಸಬಾ ಗ್ರಾಮದ ತೋಟದ ಮನೆ ಕಾಳಿಕಾಂಬ ಎಂಬಲ್ಲಿ ಗದ್ದೆ ಬಯಲಿನಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿರುವುದು ಗಮನಕ್ಕೆ ಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.