ಜಿಲ್ಲೆ

ಕಟೀಲು ಅಭಿವೃದ್ಧಿಗೆ ಆಸ್ರಣ್ಣರ ಕೊಡುಗೆ ಅನನ್ಯ : ಪ್ರೊ.ಪಿ.ಎಲ್.ಧರ್ಮ ಶ್ಲಾಘನೆ

ಸೌಮ್ಯ ಆರ್

ಕಟೀಲು: ಮಂಗಳೂರು ವಿದ್ಯಾಲಯಕ್ಕೆ ಕಟೀಲು ದೇವಳದಿಂದ ಬಹಳಷ್ಟು ಸಹಕಾರ ನೀಡಲಾಗಿದೆ, ದೇವಳ ಅಭಿವೃದ್ಧಿಯಲ್ಲಿ ಗೋಪಾಲಕೃಷ್ಣ ಆಸ್ರಣ್ಣರ ಕೊಡುಗೆ ಅನನ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ಕಟೀಲು ದಿ.ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಐಕಳ ಹರೀಶ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ರವೀಂದ್ರ ಶೇಟ್ ಮಂಗಳೂರು, ವೈದ್ಯ ಡಾ.ಶಿವಾನಂದ ಪ್ರಭು, ಮಂಗಳೂರು ಜೈನ್ ಮಿಲನ್ ಅಧ್ಯಕ್ಷ ರತ್ನಾಕರ ಜೈನ್, ಲೀಲಾಕ್ಷ ಕರ್ಕೇರ, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಕಟೀಲು ಡಾ.ಪದ್ಮನಾಭ ಭಟ್, ಎಂ.ಬಿ.ಪುರಾಣಿಕ್, ನಯನಾಭಿರಾಮ ಉಡುಪ, ಸುಧಾಕರ ಪೇಜಾವರ, ಸಂಜಯ್ ಕುಮಾರ್, ಗಣೇಶ್ ಶೆಟ್ಟಿ, ಐಕಳ ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಸೌಜನ್ಯಾ ಗೋಪಾಲಕೃಷ್ಣ ಆಸ್ರಣ್ಣ, ಗುರುಪ್ರಸಾದ್ ಭಟ್, ಅಶ್ವಥ್ ರಾವ್ ಉಪಸ್ಥಿತರಿದ್ದರು.

ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ ಸ್ವಾಗತಿಸಿ. ಡಾ.ರಮ್ಯಾ ಆಸ್ರಣ್ಣ ನಿರೂಪಿಸಿದರು. ಬಳಿಕ ಪಾರಿಜಾತ ಯಕ್ಷಗಾನ ಬಯಲಾಟ, ನರಕಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಪ್ರಶಸ್ತಿ ಪ್ರದಾನ, ಸನ್ಮಾನ

ದಿ.ಗೋಪಾಲಕೃಷ್ಣ ಆಸ್ರಣ್ಣ ಅರ್ಚಕ ಪ್ರಶಸ್ತಿ ಉಡುಪಿಯ ಶ್ರೀ ಅನಂತೇಶ್ವರ ದೇವಳ ಪ್ರಧಾನ ಅರ್ಚಕ ಸಗ್ರಿ ವೇದವ್ಯಾಸ ಐತಾಳ ಅವರಿಗೆ, ದಿ.ಗೋಪಾಲಕೃಷ್ಣ ಆಸ್ರಣ್ಣ ಮೊಕ್ತೇಸರ ಪ್ರಶಸ್ತಿ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥ ದೇವಳ ಆನುವಂಶಿಕ ಮೊಕ್ತೇಸರ ಕುಲದೀಪ ಎಂ.ಚೌಟರಿಗೆ, ದಿ.ಗೋಪಾಲಕೃಷ್ಣ ಆಸ್ರಣ್ಣ ಕಲಾವಿದ ಪ್ರಶಸ್ತಿ ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣುಶರ್ಮ ಅವರಿಗೆ ನೀಡಿ ಸನ್ಮಾನಿಸಲಾಯಿತು. ಸಾಧಕರ ನೆಲೆಯಲ್ಲಿ ಜಾಗತಿಕ ಬಂಟರ ಸಂಘ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್, ಕೃಷಿಕರಾದ ಜಾನ್ ಡೆನ್ನಿಸ್ ಡಿಸೋಜ, ಬಪ್ಪನಾಡುಗುತ್ತು ಸಾಂತ್ಯ ಹರೀಶ್ ಶೆಟ್ಟಿ ಕೊಡೆತ್ತೂರು ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.