ಜಿಲ್ಲೆ

ಮೀಯಪದವಲ್ಲಿ ಎಂ.ರಾಮಕೃಷ್ಣ ರಾವ್ ಸಂಸ್ಮರಣೆ

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ಸಂಚಾಲಕರಾಗಿದ್ದ ದಿ.ಎಂ.ರಾಮಕೃಷ್ಣ ರಾವ್ ಅವರ 19ನೇ ಪುಣ್ಯತಿಥಿ, ಸಂಸ್ಮರಣೆ ಹಾಗೂ ಸನ್ಮಾನ ಮಂಗಳವಾರ ಜರುಗಿತು.

ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಐ.ಶಂಕರನಾರಾಯಣ ಭಟ್ ಮಾತನಾಡಿದರು. ಹಳೇ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ಉದಯಕುವಾರ್ ಎಂ. ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಪರಿಚಯಿಸಿದರು. ಕಣ್ಣೂರು ಯುನಿವರ್ಸಿಟಿ ಬಿಎ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹಳೇ ವಿದ್ಯಾರ್ಥಿನಿ ಆದಿಶ್ರೀ ಎಸ್.ಎನ್. ಅವರನ್ನು ಅಭಿನಂದಿಸಲಾಯಿತು. ಶಿಕ್ಷಕ ರಾಮಚಂದ್ರ ಕೆ.ಎಂ. ಅಭಿನಂದನಾ ಪತ್ರ ವಾಚಿಸಿದರು. ಮಂಜೇಶ್ವರ ಬಿ.ಪಿ.ಸಿ. ಜೋಯ್ ಶುಭ ಹಾರೈಸಿದರು. ವ್ಯವಸ್ಥಾಪಕಿ ರಾಜೇಶ್ವರಿ ಎಸ್.ರಾವ್ ಉಪಸ್ಥಿತರಿದ್ದರು.

ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ. ಸ್ವಾಗತಿಸಿದರು. ಶಿಕ್ಷಕರಾದ ಸುನೀಲ್ ಕುವಾರ್ ಹಾಗೂ ಸ್ವಾತಿ ಟಿ. ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ವಂದಿಸಿದರು.