ಜಿಲ್ಲೆ

18 ರಂದು ದೇಶ ಮಂಗಲ ಕೃಷ್ಣ ಕಾರಂತ ಸಂಸ್ಮರಣೆ:

ಸೌಮ್ಯ ಆರ್

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದೇಶಮಂಗಲ ದಿ.ಕೃಷ್ಣ ಕಾರಂತರ ಸಂಸ್ಮರಣಾ ಕಾರ್ಯಕ್ರಮ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.18ರಂದು ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಶೇಣಿ ಬಾಲಮುರಳಿ ಅವರಿಂದ ಹರಿಕಥಾ ಕಾರ್ಯಕ್ರಮ, 11.30ಕ್ಕೆ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರಿಂದ ದೇಶಮಂಗಲ ಕಾರಂತರ ಸಂಸ್ಕರಣೆ, ಕೆ.ಆರ್.ಆಳ್ವ ಕಂಬಾರು ಅವರ ಅಧ್ಯಕತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಜ್ಯೋತಿಷಿ ನಾರಾಯಣ ರಂಗಾಭಟ್ಟ ಮಧೂರು ಉದ್ಘಾಟಿಸುವರು. ನಿವೃತ್ತ ಮುಖ್ಯಶಿಕ್ಷಕ ಕೃಷ್ಣ ಶರ್ಮ ಕುಕ್ಕೆ ಸುಬ್ರಹ್ಮಣ್ಯ, ಉಮೇಶ ಶಿರೂರು ಫಣಿಯಪ್ಪಯ್ಯ ಪ್ರತಿಷ್ಠಾನ ಬೈಂದೂರು, ಉದ್ಯಮಿಗಳಾದ ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 2.30ರಿಂದ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತೆಂಕು-ಬಡಗು ಖ್ಯಾತಿಯ ರಾಘವೇಂದ್ರ ಮಯ್ಯ ಹಾಲಾಡಿ ಭಾಗವತರಾಗಿ ಭಾಗವಹಿಸಲಿದ್ದಾರೆ. ರಾಧಾಕೃಷ್ಣ ಕಲ್ಚಾರ್, ಉಜಿರೆ ಅಶೋಕ್ ಭಟ್, ಸರ್ಪಂಗಳ ಈಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವೈಕುಂಠ ಹೇರ್ಳೆ ಸಾಸ್ತಾನ ಅರ್ಥಧಾರಿಗಳಾಗಿ ಭಾಗವಹಿಸುವರು.

ದೇಶಮಂಗಲ ಕೃಷ್ಣ ಕಾರಂತ ಅವರು ದಾಮೋದರ ಅಗ್ಗಿತ್ತಾಯ ಬೈಲಂಗಡಿ, ಶೇಣಿ ಗೋಪಾಲಕೃಷ್ಣ ಭಟ್, ಕೋಟಕುಂಜ ನಾರಾಯಣ ಶೆಟ್ಟಿ ಜತೆ ತಾಳಮದ್ದಳೆಯಲ್ಲಿ ಒಡನಾಡಿಯಾಗಿದ್ದವರು. ಉಳಿಯ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯ ಕಲಾವಿದರಾಗಿದ್ದರು.