ಜಿಲ್ಲೆ

ಯು.ಪಿ.ಕುಣಿಕುಳ್ಳಾಯರ ಆದರ್ಶ ಕನ್ನಡಿಗರಿಗೆ ಮಾದರಿ : ಕೆ.ಮುರಳೀಧರ ಬಳ್ಳಕ್ಕುರಾಯ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕಾಸರಗೋಡಿನಲ್ಲಿ ಕನ್ನಡದ ಸವಲತ್ತು ಉಳಿಸುವುದಕ್ಕಾಗಿ, ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯ ಅವಿರತವಾಗಿ ಶ್ರಮಿಸಿದವರು. ಕನ್ನಡ ಭಾಷೆ, ಕನ್ನಡಿಗರಿಗೆ ಅನ್ಯಾಯವಾದಾಗ ನ್ಯಾಯ ದೊರಕಿಸಿಕೊಟ್ಟಿರುವ ಉಬ್ರಂಗಳ ಪದ್ಮನಾಭ ಕುಣಿಕುಳ್ಳಾಯ(ಯು.ಪಿ.ಕುಣಿಕುಳ್ಳಾಯ) ಅವರು ಸ್ಮರಣೀಯರು. ಅವರ ವ್ಯಕ್ತಿತ್ವ, ಬದುಕು, ಆದರ್ಶ ಕನ್ನಡಿಗರಿಗೆ ಮಾದರಿ ಎಂದು ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಕೆ.ಮುರಳೀಧರ ಬಳ್ಳಕ್ಕುರಾಯ ಹೇಳಿದರು.

ಮಾಜಿ ಶಾಸಕ, ಕನ್ನಡ ಹೋರಾಟಗಾರ, ವಕೀಲ ದಿ.ಯು.ಪಿ ಕುಣಿಕುಳ್ಳಾಯ ಅವರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆ ತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಗೌರವ ಕಾರ್ಯದರ್ಶಿ ಬಿ.ರಾಮಮೂರ್ತಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ ಸುಕೇಶ ಎ., ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ, ಕನ್ನಡ ನೌಕರರ ಸಂಘ ಮಾಜಿ ಅಧ್ಯಕ್ಷ ಡಿ.ಜಯನಾರಾಯಣ ತಾಯನ್ನೂರು ಮಾತನಾಡಿದರು.

ನಟ ಕಾಸರಗೋಡು ಚಿನ್ನಾ, ಹಿರಿಯ ಸಾಹಿತಿ ವೈ.ಸತ್ಯನಾರಾಯಣ, ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್, ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಎಂ.ಕಾಞಂಗಾಡು, ಪತ್ರಕರ್ತ ವೀಜಿ ಕಾಸರಗೋಡು, ಸುಕುಮಾರ ಆಲಂಪಾಡಿ, ಪಿ.ದಿವಾಕರ ಅಶೋಕನಗರ, ಬಿ.ಕೆ.ಪ್ರಕಾಶ, ಸಂಜೀವ ಕೆ.ಬಿ., ಪುರುಷೋತ್ತಮ ಭಟ್ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.