ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮಂಡೆಕೋಲು ಗ್ರಾಮದ ಪುಷ್ಪಾ ಎಂಬುವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. 
ಜಿಲ್ಲೆ

ಮನೆ ಮೇಲೆ ಉರುಳಿದ ತೆಂಗಿನಮರ

ಸೌಮ್ಯ ಆರ್

ಸುಳ್ಯ: ಮಂಗಳವಾರ ಸುರಿದ ಭಾರಿ ಗಾಳಿ-ಮಳೆಗೆ ಪಂಜ ಕರಿಕ್ಕಳದ ಪುಂಡಿಮನೆ ಭಾಗೀರಥಿ ಅವರ ಹಟ್ಟಿ ಮೇಲೆ ತೆಂಗಿನಮರ ಬಿದ್ದು ಹಟ್ಟಿ ಹಾಗೂ ಸನಿಹದಲ್ಲೇ ಇದ್ದ ಕೊಟ್ಟಿಗೆಗೂ ಹಾನಿಯಾಗಿದೆ.

ಹಟ್ಟಿಯಲ್ಲಿದ್ದ ಜಾನುವಾರುಗಳು ಸಣ್ಣ ಗಾಯಗಳೊಂದಿಗೆ ಪಾರಾಗಿವೆ. ತಾಲೂಕಿನ ಹಲವೆಡೆ ಅಡಕೆಮರ, ತೆಂಗಿನಮರ ಉರುಳಿ ಕೃಷಿಗೆ ಅಪಾರ ಹಾನಿಯಾಗಿದೆ. ಮಂಡೆಕೋಲಿನ ಪುಷ್ಪಾ ಎಂಬುವರ ಮನೆಗೂ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಇನ್ನೊಂದು ಘಟನೆಯಲ್ಲಿ ಬೆಳ್ಳಾರೆಯ ಪಡ್ಪು ಎಂಬಲ್ಲಿ ಪರ್ತಿಕೆರೆ ಗಿರಿಜ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮತ್ತೊಂದು ಘಟನೆಯಲ್ಲಿ ಸುಳ್ಯ ಕಸಬಾ ಗ್ರಾಮದ ಪರಿವಾರಕಾನ ಉಮೇಶ್ ಎಂಬುವರ ಮನೆಯ ಮೇಲೆ ಬೃಹತ್ ಗಾತ್ರದ ಸಾಗುವಾನಿ ಮರ ಬಿದ್ದು ಅಪಾರ ಹಾನಿ ಉಂಟಾದ ಘಟನೆ ನಡೆದಿದೆ.