ಕೋಸ್ಟಲ್ ಗೇಡ್ ಹೋಲ್ಡಿಂಗ್ ಕಂಪನಿಯ ಲೋಗೋವನ್ನು ಮಂಗಳೂರು ಉಪವಿಭಾಗದ ಅಬಕಾರಿ ಡಿವೈಎಸ್‌ಪಿ ಸೌಮ್ಯಲತಾ ಬಿಡುಗಡೆಗೊಳಿಸಿದರು. ತನುಷ್ ಎನ್.ಶೆಟ್ಟಿ, ನಂಶಿದ್ ಖಂಡತ್ತಿಲ್, ಪರಿಪಾಲನಾ ಕೇಂದ್ರ ಬೆಳ್ತಂಗಡಿ ಧರ್ಮಪ್ರಾಂತ್ಯ ನಿರ್ದೇಶಕ ರೆ.ಫಾ.ಜೋಸೆಫ್ ಮಟ್ಟಮ್ ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ಕೋಸ್ಟಲ್ ಗೇಟ್ ವೆಬ್‌ಸೈಟ್, ಲೋಗೋ ಅನಾವರಣ

ಸೌಮ್ಯ ಆರ್

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಕೋಸ್ಟಲ್ ಗೇಡ್ ಹೋಲ್ಡಿಂಗ್ ಕಂಪನಿಯ ಹೊಸ ಪ್ರೊಜೆಕ್ಟ್ ಆರಂಭಗೊಳ್ಳಲಿದ್ದು, ಇದರ ವೆಬ್‌ಸೈಟ್ ಹಾಗೂ ಲೋಗೋ ಮತ್ತು ಫ್ಲಾಗ್ ಅನಾವರಣ ಶನಿವಾರ ಅಡ್ಡಹೊಳೆಯಲ್ಲಿ ನಡೆಯಿತು.

ಮಂಗಳೂರು ಉಪವಿಭಾಗದ ಅಬಕಾರಿ ಡಿವೈಎಸ್‌ಪಿ ಸೌಮ್ಯಲತಾ ಲೋಗೋ ಬಿಡುಗಡೆಗೊಳಿಸಿದರು. ವೆಬ್‌ಸೈಟನ್ನು ತನುಷ್ ಎನ್.ಶೆಟ್ಟಿ, ಪ್ರಾದೇಶಿಕ ನಿರ್ದೇಶಕರು ಯುವ ಸಲಹಾ ಮಂಡಳಿ, ಮಹಿಳಾ ಸುರಕ್ಷತೆ ಮಸೂದೆ ದಕ್ಷಿಣ ಭಾರತ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾಲೇಜು ವಿದ್ಯಾರ್ಥಿಗಳ ಸಂಘ ಬಿಡುಗಡೆಗೊಳಿಸಿದರು.

ಫ್ಲಾಗ್‌ನ್ನು ನಂಶಿದ್ ಖಂಡತ್ತಿಲ್ ಹಾಗೂ ಪರಿಪಾಲನಾ ಕೇಂದ್ರ ಬೆಳ್ತಂಗಡಿ ಧರ್ಮಪ್ರಾಂತ್ಯ ನಿರ್ದೇಶಕ ರೆ.ಫಾ.ಜೋಸೆಫ್ ಮಟ್ಟಮ್ ಅನಾವರಣಗೊಳಿಸಿದರು. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬೆಳವಾಡಿ, ಶಿರಾಡಿ ಗ್ರಾಪಂ ಅಧ್ಯಕ್ಷ ಕಾರ್ತಿಕೇಯನ್ ಉಪಸ್ಥಿತರಿದ್ದರು.

ಸಂತೋಷ್ ಕೆ.ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳನ್ನು ಗೌರವಿಸಲಾಯಿತು. ಸಂಸ್ಥೆ ಮುಖ್ಯಸ್ಥರಾದ ಸ್ಥಿತಿಲ್ ಕೆ.ಎಂ., ಸೀನು ಅಬ್ರಹಾಂ ಕಾರ್ಯಕ್ರಮ ನಿರ್ವಹಿಸಿದರು.

ಸೇವೆಗಳು, ಸೌಲಭ್ಯಗಳು

ಕೋಸ್ಟ್ ಹಿಲ್ಸ್ ಕೆಫೆ, ಲಾಡ್ಜ್ ಮತ್ತು ವೆಜ್ ರೆಸ್ಟೋರೆಂಟ್, ವಿಶಾಲವಾದ ಪಾರ್ಕಿಂಗ್, ಧ್ಯಾನ ಕೊಠಡಿ, ತೆರೆದ ವೇದಿಕೆ, ಶಾಪಿಂಗ್ ಮಳಿಗೆಗಳು, ಮಕ್ಕಳ ಆಟದ ಪ್ರದೇಶ, ಪ್ರೀಮಿಯಂ ವಾಶ್ ರೂಂಗಳು, ಉದ್ಯಾನ ಮತ್ತು ಪರ್ವತ ನೋಟ, ಟ್ರೆಕ್ಕಿಂಗ್ ವಾಸ್ತವ್ಯ, ಇವಿ ಚಾರ್ಜಿಂಗ್ ಪಾಯಿಂಟ್, ಬೈಕರ್ಸ್ ಪಾಯಿಂಟ್. ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿ, ಯುವಕರಿಗೆ ಕೌಶಲ ಅಭಿವೃದ್ಧಿ ಕಾರ್ಯಕ್ರಮ, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ಸೇವೆಗಳ ಪ್ರಚಾರ ಮತ್ತು ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಆದ್ಯತೆ, ಸಿಎಸ್‌ಆರ್ ಚಟುವಟಿಕೆಗಳು, ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿ.