ಜಿಲ್ಲೆ

coast guard ನಿವೃತ್ತ ಐಜಿ ನೋಜ್‌ ಬಾಡ್ಕರ್‌ಗೆ 3 ನೇ ರಾಷ್ಟ್ರಪತಿ ಪದಕ ಪ್ರದಾನ

ಕಾರವಾರ: ಭಾರತೀಯ ತಟ ರಕ್ಷಕ ದಳದ (coast guard) ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಮನೋಜ್ ಬಾಡಕರ್ ಅವರಿಗೆ ರಾಷ್ಟçಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ.

ಮಂಗಳವಾರ ನವದೆಹಲಿಯ ಭಾರತ ಮಂಡಪAನಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪದಕ ಪ್ರಧಾನ ಮಾಡಿದರು.

coast guard

ಕಾರವಾರ ಮೂಲದವರಾದ ಮನೋಜ ಬಾಡಕರ್ ಅವರು ತಟ ರಕ್ಷಕದ ಅಳ ಅಥವಾ ಕೋಸ್ಟ್ಗಾರ್ಡ್ನ ಅತ್ಯುನ್ನತ ಹುದ್ದೆಗೆ ಏರಿದ್ದರು. 2023 ರ ಜನವರಿ 26 ರಂದು ಬಾಡ್ಕರ್ ಅವರು ಕೋಸ್ಟ್ಗಾರ್ಡ್ ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿದ್ದಾಗ ರಾಷ್ಟçಪತಿ ಪದಕವನ್ನು ಘೋಷಿಸಲಾಗಿತ್ತು. 37 ವರ್ಷ ಕೋಸ್ಟ್ಗಾರ್ಡ್ನ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಮನೋಜ ಬಾಡಕರ್ ಅವರು 2023 ರಲ್ಲಿ ನಿವೃತ್ತರಾಗಿದ್ದರು. ಅವರು ಈ ಹಿಂದೆ ಎರಡು ಬಾರಿ ರಾಷ್ಟ್ರಪತಿ ಅವರಿಂದ ಪದಕವನ್ನು ಪಡೆದಿದ್ದರು.