ಗೊರೇಬಾಳ: ಸಹಕಾರ ಸಂಘಗಳಲ್ಲಿ ರೈತರ ಏಳಿಗೆಗೆ ಅನೇಕ ಸೌಲಭ್ಯಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ಆರ್‌ಡಿಸಿಸಿ ಬ್ಯಾಂಕ್ ವೃತ್ತ ವೀಕ್ಷಕ ಕೆ.ಬಸವರಾಜ ಹೇಳಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟದ ಸಹಯೋಗ ದಲ್ಲಿ ಆಯೋಜಿಸಿದ್ದ ಆಡಳಿತ ಮಂಡಳಿ ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವ್ಯವಸಾಯದ ಉದ್ದೇಶದಿಂದ ರೈತರಿಗೆ ಸರ್ಕಾರ ಶೂನ್ಯ ಬಡ್ಡಿಯಂತೆ ಸಾಲ ಒದಗಿಸುವ ಗುರಿ ಹೊಂದಿದ್ದು, ಇದರಿಂದ ರೈತರ ಏಳಿಗೆ ಆಗಲಿದೆ. ರೈತರು ಸೌಲಭ್ಯದ ಸದುಪಯೋಗ ಪಡೆದು ಆರ್ಥಿಕವಾಗಿ ಬೆಳವಣಿಗೆಯಾಗಬೇಕೆಂದರು.
ಇದನ್ನೂ ಓದಿ: ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ, ನೇಮಕಾತಿ ಅಕ್ರಮಕ್ಕೆ ಬ್ರೇಕ್
ಜಿಲ್ಲಾ ಸಹಕಾರ ಶಿಕ್ಷಕಿ ಕೆ.ಅಶ್ವಿನಿ ಮಾತನಾಡಿ, ಸಹಕಾರ ಸಂಘದ ಸಭೆಗಳು, ಸಂಘದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿಗಳು, ಏಕರೂಪ ಬೈಲಾ ತಿದ್ದುಪಡಿ ಕುರಿತು ಮಾಹಿತಿ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ಚನ್ನಬಸವ ನೆಟೆಕಲ್, ಸದಸ್ಯರಾದ ಗೋವಿಂದ ರಡ್ಡಿ, ವೀರೇಶ ಹಾಲಾಪುರ, ಶರಣಪ್ಪ ಹೂಗಾರ, ಮಂಜುನಾಥ ಭೋವಿ, ಚನ್ನಮ್ಮ, ಹುಸೇನಪ್ಪ, ತಿಮ್ಮಪ್ಪ, ಬುಡ್ಡಪ್ಪ ನಾಯಕ ಇದ್ದರು.