

ಶಿವಾನಂದ ಹಿರೇಮಠ ಗದಗ
ಕೃಷಿ ಪತ್ತಿನ ಸಹಕಾರ ಸಂಘಗಳ(ಪ್ಯಾಕ್ಸ್) ಸಿಬ್ಬಂದಿಯ ಹಿತರಕ್ಷಣೆಗೆ ಸಹಕಾರ ಸಂಘಗಳ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಇದರ ಅನ್ವಯ 2009ರಲ್ಲಿ ರದ್ದಾಗಿದ್ದ 1959ರ ಸಹಕಾರ ಸಂಘಗಳ ಕಾಯ್ದೆಯ 128ಎ ಅನುಚ್ಛೇದವನ್ನು ಮರುಸ್ಥಾಪಿಸಲಾಗಿದ್ದು, ಜಿಲ್ಲೆಯೂ ಸೇರಿ ರಾಜ್ಯದ ಸಾವಿರಾರು ಸಿಬ್ಬಂದಿ ಇದರ ಪ್ರಯೋಜನ ಪಡೆಯಲಿದ್ದಾರೆ.
ಸಿಬ್ಬಂದಿಯ ನೇಮಕಾತಿ, ವೇತನ, ಶ್ರೇಣಿ ಮತ್ತು ಶಿಸ್ತು ಕ್ರಮ ಜರುಗಿಸುವ ಸಂಬಂಧ 128ಎ ಅನುಚ್ಛೇದ ಸಹಕಾರಿ ಆಗಲಿದೆ. ಪ್ಯಾಕ್ಸ್ ಸಿಬ್ಬಂದಿಯ ಹಿತರಕ್ಷಣೆಗಾಗಿ ರಾಜ್ಯ ಮಟ್ಟದಲ್ಲಿ ಒಂದು ಸಮಿತಿ ರಚನೆ ಜತೆಗೆ ಜಿಲ್ಲೆಗೊಂದರಂತೆ ಸಮಿತಿ ರಚಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಗದಗ ಜಿಲ್ಲೆಯ 176 ಹಾಗೂ ರಾಜ್ಯದ 6,040 ಪ್ಯಾಕ್ಸ್ ಸಿಬ್ಬಂದಿ ತಿದ್ದುಪಡಿಯ ಲಾಭ ಪಡೆಯಲಿದ್ದಾರೆ.
ಪ್ಯಾಕ್ಸ್ಗಳ ಆರ್ಥಿಕ ಅವ್ಯವಹಾರ, ಅಕ್ರಮ ತಡೆ ಹಾಗೂ ಸುಧಾರಣೆ ಕುರಿತು 2009ರ ವೈದ್ಯನಾಥ ವರದಿ ಆಧರಿಸಿ ಸಹಕಾರ ಕಾಯ್ದೆ 1959ರ 128ಎ ಅನುಚ್ಛೇದವನ್ನು ತಿದ್ದುಪಡಿ ಮೂಲಕ ರದ್ದು ಮಾಡಲಾಗಿತ್ತು. ಈ ಕ್ರಮ ಪ್ಯಾಕ್ಸ್ ಸಿಬ್ಬಂದಿ ಮೇಲೆ ದುಷ್ಪರಿಣಾಮ ಬೀರಿತ್ತು. ಇದನ್ನು ಸರಿಪಡಿಸಲು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರದ ಮೇಲೆ ಒತ್ತಡ ಹೇರುತ್ತಿತ್ತು. 2017ರಲ್ಲಿ ಸಹಕಾರ ಇಲಾಖೆ ಅಂದಿನ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಕಾಯ್ದೆಗೆ 98ಇಎ ಅನುಚ್ಛೇದ ಒಳಪಡಿಸಿ ಪ್ಯಾಕ್ಸ್ಗಳ ಮೇಲಿನ ನಿಯಂತ್ರಣ ಮತ್ತು ಆಡಳಿತ ಸುಧಾರಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಆಗಬೇಕೆಂಬುದು ವರದಿ ಸಲ್ಲಿಸಿತ್ತು. ಇಲಾಖೆ ಹಾಗೂ ಕ್ಷೇಮಾಭಿವೃದ್ಧಿ ಸಂಘಗಳ ಆಗ್ರಹ ಮತ್ತು ಸಿಬ್ಬಂದಿ ಹಿತರಕ್ಷಣೆಗೆ 128ಎ ಅನುಚ್ಛೇದ ಮರುಸೇರ್ಪಡೆ ಮಾಡಲಾಗಿದೆ.
ಪ್ಯಾಕ್ಸ್ ವೆಲ್ೇರ್ ೆಡರೇಷನ್ ಮತ್ತು ಸಿಬ್ಬಂದಿಯ ಯೋಗಕ್ಷೇಮಕ್ಕೆ ಸರ್ಕಾರ ಬದ್ಧವಾಗಿದೆ. ಹಲವು ವರ್ಷಗಳ ಹೋರಾಟ ಅವರದ್ದಾಗಿತ್ತು. ಸಿಬ್ಬಂದಿ ಅನುಕೂಲಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಆದಷ್ಟು ಬೇಗ ಸಮರ್ಪಕವಾಗಿ ಜಾರಿಯಾಗಲಿದೆ.ಕೆ.ಎನ್. ರಾಜಣ್ಣ, ಸಹಕಾರ ಸಚಿವ
ಈಗಿರುವ ಲೋಪವೇನು?