ಜಿಲ್ಲೆ

ಸಿಎಂ ಸ್ಥಾನಕ್ಕಾಗಿ ಯತ್ನಾಳ್​ ಮತ್ತು ನನ್ನ ನಡುವೆ ಪೈಪೋಟಿ ಎಂದ ಉಮೇಶ್​ ಕತ್ತಿ

ತುಮಕೂರು: ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉಮೇಶ್ ಕತ್ತಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಉಮೇಶ್​ಕತ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೂ ಸಿಎಂ ಆಗೋ ಆಸೆ ಇದೆ. ಯತ್ನಾಳ್​ ಸೀನಿಯರ್ ಇದಾರೆ, ಅವರಿಗಿಂತ ನಾನು ಸೀನಿಯರ್ ಇದ್ದಿನಿ. ಸಿಎಂ ಸ್ಥಾನಕ್ಕಾಗಿ ನನಗೂ ಮತ್ತು ಯತ್ನಾಳ್​ಗೆ ಪೈಪೋಟಿ ನಡೆಯಲಿದೆ ಎಂದರು. ಇದನ್ನೂ ಓದಿರಿ ಶಿವಮೊಗ್ಗದಲ್ಲಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಸ್ಫೋಟದ ಭೀಕರತೆ

ಸದ್ಯ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆ ಪೋಸ್ಟ್ ಸದ್ಯಕ್ಕೆ ಖಾಲಿ ಇಲ್ಲ. ಬಿಜೆಪಿಯಲ್ಲಿ 75 ವರ್ಷದ ವರೆಗೂ ಸಿಎಂ ಆಗೋಕೆ ಅವಕಅಶವಿದೆ. ಜೀವನದಲ್ಲಿ ಸಿಎಂ ಆಗೋ ಆಸೆ ಎಲ್ಲರಿಗೂ ಇರುತ್ತೆ. ಹಾಗೆ ನನಗೂ ಇದೆ. ಯತ್ನಾಳ್ ಮತ್ತು ನನಗೆ ಇನ್ನೂ 60 ವರ್ಷ. ನನಗೆ ಶ್ರೀಗಳ ಆಶೀರ್ವಾದವಿದೆ. ಮುಂದಿನದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೇನೆ ಎಂದು ಉಮೇಶ್ ​ಕತ್ತಿ ಹೇಳಿದರು.

ಸಿಎಂ ಯಡಿಯೂರಪ್ಪ ಅವರು ನನಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಬ್ದಾರಿ ಕೊಟ್ಟಿದ್ದಾರೆ. ರಾಜ್ಯಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡಿವೆ ಎಂದ ಸಚಿವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗೂ ಈಗಲೂ ಇದೆ. ಪ್ರತ್ಯೇಕ ರಾಜ್ಯದ ಕೂಗು ಮುಂದಕ್ಕೂ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.