ಜಿಲ್ಲೆ

CM Office Action: ವಿದ್ಯುತ್‌ ಶಾಕ್‌ನಿಂದ 2 ನೇ ತರಗತಿ ವಿದ್ಯಾರ್ಥಿನಿ ಸಾವು ಮುಖ್ಯ ಶಿಕ್ಷಕರ Suspendಗೆ ಕ್ರಮ

Uttara Kannada - Subash Hegde

ಕಾರವಾರ: ವಿದ್ಯುತ್‌ ಶಾಕ್‌ ತಗುಲಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಂತ್ರಿ ಕಾರ್ಯಾಲಯ CM Office Action  ಕ್ರಮ ವಹಿಸಿದೆ.   ಮುಖ್ಯಾಧ್ಯಾಪಕರ ಅಮಾನತಿಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಂತ್ರಿ ಅವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಹಳಿಯಾಳದ ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಮೂತ್ರವಿಸರ್ಜನೆಗೆ ಹೋದ ಸಮಯದಲ್ಲಿ ವಿದ್ಯುತ್‌ ತಂತಿ ತಗುಲಿ ತೀವ್ರ ಆಘಾತವಾಗಿ ಮೃತಪಟ್ಟಿರುವ ಘಟನೆ ನವೆಂಬರ್‌ 28 ರಂದು ನಡೆದಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿರಸಿ ಡಿಡಿಪಿಐ ಅವರಿಗೆ ಸೂಚಿಸಿದ್ದರು.CM Office Action

ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸದರಿ ಶಾಲೆಗೆ ಕೆಇಬಿ ಅನುಮತಿ ಇಲ್ಲದೆ ವಿದ್ಯುತ್‌ ಸಂಪರ್ಕ ಪಡೆದುಕೊಂಡು ಬೋರ್‌ವೆಲ್‌ಗೆ ಸಂಪರ್ಕ ಕಲ್ಪಿಸಿದ್ದು ಈ ತಂತಿ ಹಲವು ಕಡೆ ತುಂಡಾಗಿ ಜಾಯಿಂಟ್‌ ಮಾಡಿದ್ದು ಇರುತ್ತದೆ. ಈ ತಂತಿಯ ಮೇಲೆ ಅದೇ ಸಮಯದಲ್ಲಿ ಕೋತಿಗಳು ಓಡಾಡಿದ್ದರಿಂದ ತಂತಿ ತುಂಡಾಗಿ ಬಿದ್ದಿರುವುದನ್ನು ಈ ವಿದ್ಯಾರ್ಥಿನಿ ಗಮನಿಸದೆ ಹರಿದ ತಂತಿಯನ್ನು ಸ್ಪರ್ಶಿಸಿದ್ದು ಅವಘಡಕ್ಕೆ ಕಾರಣವಾಗಿರುತ್ತದೆ.

CM Office Action

ಇಲ್ಲಿ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದ್ದು ಸ್ಪಷ್ಟವಾಗಿರುತ್ತದೆ. ಈ ಕುರಿತು ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯತನದ ಹಿನ್ನೆಲೆಯಲ್ಲಿ ಸದರಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ.