ಜಿಲ್ಲೆ

ಗ್ರಾಮ ವಾಸ್ತವ್ಯಕ್ಕೆ ತೆರೆದ ಎತ್ತಿನ ಗಾಡಿಯಲ್ಲಿ ಎಂಟ್ರಿ ನೀಡಿದ ಸಿಎಂ, ಸಚಿವರು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಇಂದು ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್​​.ಅಶೋಕ್​ ಅವರು ತೆರೆದ ಎತ್ತಿನ‌ ಗಾಡಿಯಲ್ಲಿ ಎಂಟ್ರಿ ನೀಡಿದರು.

ಗ್ರಾಮ ವಾಸ್ತವ್ಯಕ್ಕೆ ಚಾಲನೆ‌ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತಿತರ ನಾಯಕರು ಎತ್ತಿನ ಗಾಡಿಯಲ್ಲಿ ಆಗಮಿಸಿದರು. ಎತ್ತಿನ ಗಾಡಿಯ ಸಾರಥ್ಯವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಹಿಸಿಕೊಂಡಿದ್ದರು.

ಸಿಎಂ ಬೊಮ್ಮಾಯಿ ಅವರ ಭೇಟಿ ಮತ್ತು ಪ್ರವೇಶದ ವಿಧಾನದಿಂದ ಭಾರೀ ಹುರುಪುಗೊಂಡ ಜನರು ನೂಕುನುಗ್ಗಲು ಆರಂಭಿಸಿದರು. ಜೊತೆಗೆ, ಸಿಎಂ ಸೇರಿದಂತೆ ಬಹುತೇಕ ಜನರು ಮಾಸ್ಕ್​ ಮತ್ತು ಸಾಮಾಜಿಕ ಅಂತರವಿಲ್ಲದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂತು.