ಬೆಂಗಳೂರು: ಪೊಲೀಸರು ಇಂದು ತಂತ್ರಜ್ಞಾನ ಬಳಸವ ಅವಶ್ಯಕತೆ ಬಹಳ ಇದೆ ಹಾಗೂ ಅದು ಅನಿವಾರ್ಯ ಕೂಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿಗಳನ್ನು ಇಂದು ಲೋಕಾರ್ಪಣೆ ಮಾಡಿ ಅವರು ಈ ವಿಷಯ ತಿಳಿಸಿದರು.
ರಾಜಧಾನಿಯ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಂತ್ರಜ್ಞಾನಾಧಾರಿತ ಸೌಲಭ್ಯಗಳು, ಸಂಚಾರ ಬೀಟ್ ವ್ಯವಸ್ಥೆ, ಹಾಗೂ ಸಂಚಾರ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.ಸಂಚಾರ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ, ಸಿಗ್ನಲ್ಗಳಲ್ಲಿ ಎಎನ್ಪಿಆರ್ ಕ್ಯಾಮರಾ ಬಳಕೆಗೆ ಚಾಲನೆ, ಜತೆಗೆ ಎಸ್ಎಂಎಸ್ ಮೂಲಕ ದಂಡದ ಚಲನ್ ಕಳಿಸುವ ವ್ಯವಸ್ಥೆಗೂ ಅವರು ಚಾಲನೆ ನೀಡಿದರು.
ಇದನ್ನೂ ಓದಿ: ಹೊಸ ವೈದ್ಯಕೀಯ ಕಾಯ್ದೆ ವಿರೋಧಿಸಿ 56 ಹಿರಿಯ ವೈದ್ಯರ ರಾಜೀನಾಮೆ!; ಪ್ರತಿಷ್ಠಿತ ಆಸ್ಪತ್ರೆಗಳ ಉನ್ನತ ಸ್ಥಾನಕ್ಕೆ ವಿದಾಯ..
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂಚಾರ ಹಾಗೂ ವಾಹನ ದಟ್ಟಣೆ ಕುರಿತು ಮಾತನಾಡಿದ ಸಿಎಂ, ಅದನ್ನು ತುಲನಾತ್ಮಕವಾಗಿ ಹೇಳಿದರು. ಬೆಂಗಳೂರಿನಲ್ಲಿ ಪ್ರತಿನಿತ್ಯ ಭಾರಿ ಪ್ರಮಾಣದಲ್ಲಿ ವಾಹನಗಳು ಬರುತ್ತಿವೆ. ಇಲ್ಲಿ ನಿತ್ಯ ಹುಟ್ಟುವ ಮಕ್ಕಳು ಹಾಗೂ ರಸ್ತೆಗಳಿಯುವ ವಾಹನಗಳ ನಡುವೆ ಸ್ಪರ್ಧೆ ಇಟ್ಟರೆ, ಸಂಖ್ಯೆಯಲ್ಲಿ ವಾಹನಗಳೇ ಗೆಲ್ಲುತ್ತವೆ ಎಂದ ಸಿಎಂ, ಸಂಚಾರ ಪೊಲೀಸರಿಗೆ ತಂತ್ರಜ್ಞಾನದ ಬಳಕೆ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡ ವಸಂತಕುಮಾರಿ; ಮುಂಗಡ ಪಡೆದು ಬಲೆಗೆ ಬಿದ್ದ ವಿಶೇಷ ಭೂಸ್ವಾಧೀನಾಧಿಕಾರಿ..
ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂತಾದವರು ಪಾಲ್ಗೊಂಡಿದ್ದರು.