ಸಂಸದ ಅನಂತ್‌ಕುಮಾರ ಹೇಳಿಕೆ ಖಂಡಿಸಿ ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ತಾಲೂಕು ಅಹಿಂದ ಸಂಘಟನೆಯಿಂದ ಮನವಿ ಸಲ್ಲಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಬಿ.ಎಸ್.ಪೂಜಾರಿ ನಿಲವಂಜಿ, ಪ್ರಮುಖರಾದ ಹನುಮಂತ್ರಾಯ ಕಮದಾಳ, ಬಸವರಾಜ ಕೊತ್ತದೊಡ್ಡಿ, ಬಸವರಾಜ, ನರಸಣ್ಣ ನಿಲವಂಜಿ ಇತರರಿದ್ದರು. 
ಜಿಲ್ಲೆ

ಸಿಎಂ ವಿರುದ್ಧ ಅಸಂಬದ್ಧ ಹೇಳಿಕೆ

Kopala - Desk - Eraveni

ದೇವದುರ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ ಕುಮಾರ್ ಹೆಗಡೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ತಾಲೂಕು ಅಹಿಂದ ಸಂಘಟನೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಸಿಎಂ ವಿರುದ್ಧ ಏಕವಚನದಲ್ಲಿ ಹಾಗೂ ಅಸಂಬದ್ಧ ಹೇಳಿಕೆ ನೀಡಿರುವುದು ಸರಿಯಲ್ಲ. ಕೇವಲ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ರಾಜ್ಯದ 6ಕೋಟಿ ಜನರಿಗೆ ಮಾಡಿದ ಅಪಮಾನ. ಕೂಡಲೇ ಅನಂತ ಕುಮಾರ್ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ, ಸಮಾಜದಲ್ಲಿ ಶಾಂತಿನೆಲೆಸಲು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಅಹಿಂದ ಸಂಘಟನೆಯಿಂದ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ

ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಬಿ.ಎಸ್.ಪೂಜಾರಿ ನಿಲವಂಜಿ, ಪ್ರಮುಖರಾದ ಹನುಮಂತ್ರಾಯ ಕಮದಾಳ, ಬಸವರಾಜ ಕೊತ್ತದೊಡ್ಡಿ, ಬಸವರಾಜ, ನರಸಣ್ಣ ನಿಲವಂಜಿ, ಬಸವರಾಜ ಮಾಪಾ, ಮರಿಯಪ್ಪ ಗೆಜ್ಜೆಬಾವಿ, ನರಸಣ್ಣ ಗಾಣಧಾಳ, ಶಿವಾನಂದ ಪಂದ್ಯಾನ, ಇರ್ಫಾನ್ ಇತರರಿದ್ದರು.