More

    ಹೌತಿ ಬಂಡುಕೋರರ ವಿರುದ್ಧ ಅಮೆರಿಕಾ ಪ್ರತೀಕಾರ: ಭಾರತೀಯ ನೌಕಾಪಡೆ ಗಸ್ತು!

    ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಹೌತಿ ಬಂಡುಕೋರರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ‘ಭಾರತಕ್ಕೆ ಅವರೇ ಅತ್ಯುತ್ತಮ ನಾಯಕ’: ಪ್ರಧಾನಿ ಮೋದಿಗೆ ಅಮೆರಿಕಾ ಸಿಂಗರ್​ ಬೆಂಬಲ!

    ಇಲ್ಲಿಯವರೆಗೆ ಹೌತಿಗಳನ್ನು ತಡೆಯಲು ಅಮೆರಿಕಾ ಮತ್ತು ಬ್ರಿಟಿಷ್ ಸೇನೆಗಳಿಗೆ ಸಾಧ್ಯವಾಗಲಿಲ್ಲ. ಗುರುವಾರ ಸಹ ಸತತ ಐದನೇ ಬಾರಿಗೆ ಯೆಮೆನ್‌ನಲ್ಲಿ ಹೌತಿ ನೆಲೆಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ದಾಳಿ ಮಾಡಿದೆ ಎಂಬ ಸುದ್ದಿಗೆ ಜೋ ಬಿಡೆನ್ ಪ್ರತಿಕ್ರಿಯಿಸಿದ್ದಾರೆ.

    ಹೌತಿ ಬಂಡುಕೋರರ ನಾಯಕ ಅಬ್ಜೆಲ್ ಮಾಲೆಕ್ ಅಲ್-ಹೌತಿ ಗುರುವಾರ ವೀಡಿಯೊ ಸಂದೇಶದಲ್ಲಿ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ಮೂಲಕ ಪ್ರಯಾಣಿಸುವ ಹಡಗುಗಳ ಮೇಲೆ ತಮ್ಮ ದಾಳಿಯನ್ನು ಮುಂದುವರೆಸುವುದಾಗಿ ಘೋಷಿಸಿದ್ದಾನೆ. ಇಸ್ರೇಲ್‌ನೊಂದಿಗೆ ಯುದ್ಧದಲ್ಲಿ ಕಷ್ಟ, ನಷ್ಟದ ಪಾಲಾಗಿರುವ ಹಮಾಸ್, ಪ್ಯಾಲೆಸ್ತೀನಿಯನ್ನರಿಗೆ ಬೆಂಬಲವಾಗಿ ಈ ದಾಳಿಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾನೆ.

    ಅಮೆರಿಕಾ ಮತ್ತು ಬ್ರಿಟನ್‌ನ ಪ್ರತೀಕಾರದ ದಾಳಿಯು ಪ್ರಾರಂಭದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಬ್ಜೆಲ್ ಮಾಲೆಕ್, ಈ ಕ್ರಮಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದ್ದಾನೆ.

    ಭಾರತದ ಕಾಳಜಿ: ಈ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಹೇಳಿಕೊಳ್ಳುವ ಹೌತಿಗಳು ಇತರ ದೇಶಗಳನ್ನು ಗುರಿಯಾಗಿಸಲು ಮುಂದಾಗಿದ್ದಾರೆ. ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. ಬುಧವಾರ ರಾತ್ರಿ ಗಲ್ಫ್ ಆಫ್ ಈಡನ್‌ನಲ್ಲಿ ಡ್ರೋನ್ ದಾಳಿಯನ್ನು ಎದುರಿಸಿದ ಸರಕು ಹಡಗನ್ನು ಭಾರತೀಯ ಯುದ್ಧನೌಕೆ ರಕ್ಷಿಸಿದೆ. ಇದರಲ್ಲಿ 9 ಭಾರತೀಯರು ಸೇರಿದಂತೆ 22 ಸಿಬ್ಬಂದಿ ಇದ್ದರು.

    ನೌಕಾಪಡೆ ಗಸ್ತು: ಇದಾದ ಬಳಿಕ ವಿದೇಶಾಂಗ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ರಾನರ್ ಜೈಶ್ವಾಲ್ ಅವರು ಗುರುವಾರ ಕೆಂಪು ಸಮುದ್ರದ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರದೇಶವು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಪ್ರಮುಖ ಸಾರಿಗೆ ಮಾರ್ಗವಾಗಿದೆ. ಭಾರತೀಯ ನೌಕಾಪಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಭಾರತೀಯ ಹಡಗುಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

    ಒಂದೇ ಒಂದು ಹಿಟ್‌ ಸಿನಿಮಾದಿಂದ ದೊಡ್ಡ ಸ್ಟಾರ್‌ಡಮ್ ಪಡೆದ ನಟಿ ಈಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts