ಕಾರ್ಕಳ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಹಾಳೆಕಟ್ಟೆ ಬಳಿ ರಸ್ತೆಗೆ ಅಪಾಯಕಾರಿಯಾಗಿ ಬಾಗಿಕೊಂಡಿದ್ದ ಮರವೊಂದರ ಗೆಲ್ಲುಗಳನ್ನು ಅರಣ್ಯಾಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದ್ದಾರೆ.
ಕಲ್ಯಾ ಗ್ರಾಮ ಪಂಚಾಯತಿಯ ಹಾಳೆಕಟ್ಟೆ ಹಾಗೂ ನಿಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮಣ್ಣು ತಿರುವು ರಸ್ತೆಯ ಮಧ್ಯಭಾಗದಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳುವ ಸ್ಥಿತಿಯಲ್ಲಿದ್ದು, ಕೊಂಬೆಗಳು ಅಪಾಯಕಾರಿಯಾಗಿ ಸಂಪೂರ್ಣ ರಸ್ತೆ ಮೇಲೆ ಬಾಗಿದ್ದವು. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿದ್ದು, ಕೂಡಲೇ ಎಚ್ಚೆತ್ತ ಅರಣ್ಯಾಧಿಕಾರಿಗಳು ಗೆಲ್ಲುಗಳನ್ನು ಕಡಿದು ತೆರವುಗೊಳಿಸಿದ್ದಾರೆ.