ಜಿಲ್ಲೆ

ಅಯ್ಯಪ್ಪ ಮಾಲಾಧಾರಿಗಳಿಂದ ಸ್ವಚ್ಛತಾ ಕಾರ್ಯ

ಸೌಮ್ಯ ಆರ್

ಸುಳ್ಯ: ತಾಲೂಕಿನ ಮಂಡೆಕೋಲು ಕಣೆಮರಡ್ಕ ಅಯ್ಯಪ್ಪ ಮಂದಿರದಿಂದ ಮಾಲೆ ಧರಿಸಿದ ಅಯ್ಯಪ್ಪ ಭಕ್ತವೃಂದ ಶಬರಿಮಲೆ ಯಾತ್ರೆ ಮುಗಿಸಿ ಮರಳುವ ವೇಳೆ ಈ ಬಾರಿಯೂ ಪವಿತ್ರ ಪಂಪಾ ನದಿ ಸ್ವಚ್ಛ ಮಾಡುವ ಮೂಲಕ ನಿರಂತರ ನಾಲ್ಕನೆ ವರ್ಷ ನದಿ ಸ್ವಚ್ಛ ಕಾರ್ಯ ಮಾಡಿದ್ದಾರೆ.

ಕೇರಳ ರಾಜ್ಯ ಡಿಜಿಪಿ ವಿಜಯನ್ ಶಬರಿಮಲೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಸಂದರ್ಭ ಪುಣ್ಯ ಪೂಂಗಾವನವ್ ಹೆಸರಿನಡಿಯಲ್ಲಿ ಹಾಕಿಕೊಂಡ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಪೂರಕವಾಗಿ 2025 ಜನವರಿಯಲ್ಲಿ ಸುರೇಶ್ ಕಣೆಮರಡ್ಕ ನೇತೃತ್ವದ ಮಾಲಾಧಾರಿಗಳ ತಂಡ ಪ್ರಥಮ ಬಾರಿಗೆ ಬೃಹತ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿತ್ತು. ಈ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ತಿಳಿದ ಡಿಜಿಪಿ ವಿಜಯನ್ ಅವರ ತಂಡ ಪಂದಳಂನಿಂದ ಪಂಪಾಗೆ ಆಗಮಿಸಿ ಖುದ್ದು ತಮ್ಮ ಪುಣ್ಯ ಪೂಂಗಾವನಮ್ ಕಾರ್ಯಕ್ರಮದ ಸಮವಸ್ತ್ರ ನೀಡಿ ತಂಡದ ಸೇವಾ ಕಾರ್ಯದ ಬಗ್ಗೆ ಶ್ಲಾಘಿಸಿದ್ದರು.

ಇದೀಗ ಈ ವರ್ಷ ಕೂಡ ಶಬರಿಗಿರಿ ಸೇವಾ ಪ್ರತಿಷ್ಠಾನದ ಹೆಸರಿನಡಿಯಲ್ಲಿ ನಿರಂತರ ನಾಲ್ಲನೇ ವರ್ಷದ ಪಂಪಾ ನದಿ ಸ್ವಚ್ಛತೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.