ಜಿಲ್ಲೆ

ಅ.2ರಂದು ಸಿವಿಲ್​ ಸ್ಟೇಷನ್​ ವಠಾರದಲ್ಲಿ ಸ್ವಚ್ಛತಾ ಅಭಿಯಾನ

Avinash R

ಕಾಸರಗೋಡು: ಕ್ಲೀನ್​ ಸಿವಿಲ್​ ಸ್ಟೇಷನ್​ ಗ್ರೀನ್​ ಸಿವಿಲ್​ ಸ್ಟೇಷನ್​ ಪರಿಕಲ್ಪನೆಯೊಂದಿಗೆ ಕಸಮುಕ್ತ ನವಕೇರಳ ಜನಾಂದೋಲನ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರ ಸಿವಿಲ್​ ಸ್ಟೇಷನನ್ನು ಅಕ್ಟೋಬರ್​ 2ರಂದು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್​, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್​ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡುವರು.

ಕುರುಚಲು ಕಾಡಿನಿಂದ ಆವೃತವಾಗಿರುವ ಹಾಗೂ ಕಸ ತುಂಬಿಕೊಂಡಿರುವ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗುವುದು. ಕಚೇರಿಗಳ ಒಳಗೆ ರಾಶಿ ಬಿದ್ದಿರುವ ಹಳೇ ಕಡತಗಳನ್ನು ತೆಗೆದು ಶುಚಿಗೊಳಿಸಲಾಗುವುದು. ಕಚೇರಿಯ ಒಳಗೆ ಮತ್ತು ಹೊರಗೆ ಇರುವ ಎಲ್ಲ ತ್ಯಾಜ್ಯವನ್ನು ತೆಗೆದು ಹಸಿರು ಕಚೇರಿಗಳನ್ನಾಗಿ ಪರಿವರ್ತಿಸಲಾಗುವುದು.

ಸ್ವಚ್ಛತಾ ಅಭಿಯಾನದ ಅಂಗವಾಗಿ ವಿವಿಧ ಕಚೇರಿಗಳ ಪ್ರತಿನಿಧಿಗಳ ಸಭೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಪಂ ಅಧ್ಯೆ ಬೇಬಿ ಬಾಲಕೃಷ್ಣನ್​ ಅಧ್ಯಕ್ಷತೆ ವಹಿಸಿದ್ದರು.