ಜಿಲ್ಲೆ

ಪ್ರೌಢಶಾಲೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

ಸೌಮ್ಯ ಆರ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಗ್ಗ ಪ್ರೌಢಶಾಲೆಯಲ್ಲಿ ಶ್ರಮದಾನದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣದ ಸುತ್ತಲಿನ ಪರಿಸರ ಸ್ವಚ್ಛಗೊಳಿಸಿದರು.

ಶೌರ್ಯ ಘಟಕದ ಅಧ್ಯಕ್ಷ ಪ್ರವೀಣ, ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಅಶೋಕ ಹಾರೊದ್ದು, ಶಶಿಕಲಾ, ಮೋಹನಂದ, ಕೀರ್ತಿರಾಜ್, ನಾರಾಯಣ್ ಶೆಟ್ಟಿ, ಆನಂದ, ಪ್ರಮೀಳ, ಪವಿತ್ರ ಅಶೋಕ ಬೊಲ್ಮಾರು, ವಿನೋದ್, ನಾರಾಯಣ ಪೂಜಾರಿ, ರಮೇಶ, ಪ್ರಿಯಾಂಕ , ಜನಾರ್ದನ, ಕಾವಳಪಡೂರು ಗ್ರಾಮ ಪಂಚಾಯತಿ ಸದಸ್ಯರಾದ ವೀರೇಂದ್ರ ಅಮೀನ್, ಯೋಜನೆಯ ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಶೌರ್ಯ ಘಟಕದ ಸಂಯೋಜಕಿ ರೇಖಾ ಪಿ, ಸೇವಾ ಪ್ರತಿನಿಧಿ ರಜನಿ ಪಾಲ್ಗೊಂಡಿದ್ದರು.