ಜಿಲ್ಲೆ

ಕೆರ್ಜಾಡಿ ದೇವಳದಲ್ಲಿ ಸ್ವಚ್ಛತಾ ಕಾರ್ಯ

ಇಂದಿರಾ ಎನ್ ಕೆ

ಆರ್ಡಿ: ಆರ್ಡಿ ಸಮೀಪದ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಸಹ ಪರಿವಾರ ದೇವಸ್ಥಾನದಲ್ಲಿ ಪ್ರಧಾನಮಂತ್ರಿಗಳ ಕನಸಿನ ಆಶಯದಂತೆ ದೇಶದ ಎಲ್ಲ ದೇವಸ್ಥಾನ, ಮಠ ಮಂದಿರ ಸ್ವಚ್ಛತೆ ಪರಿಕಲ್ಪನೆ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಆರ್ಡಿ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಆರ್ಡಿ ಕೆರ್ಜಾಡಿ ಶ್ರೀ ದುರ್ಗಾ ಸೇವಾ ಬಳಗದವರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಮಂಗಳವಾರ ನಡೆಯಿತು.

ದೇವಳ ಗೌರವಾಧ್ಯಕ್ಷ ಬಾಬು ಶೆಟ್ಟಿ ಜಗ್ಲುಗುಡ್ಡೆ, ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ್ ಶೆಟ್ಟಿ ಆರ್ಡಿ, ಗೌರವ ಸಲಹೆಗಾರ ಸುದೀಪ್ ಹೆಗ್ಡೆ ಶೇಡಿಮನೆ, ಉಪಾಧ್ಯಕ್ಷ ಹರೀಶ್ ಹೆಗ್ಡೆ ಅರಸಮ್ಮಕಾನು, ಸಂತೋಷ ಪೂಜಾರಿ ಆರ್ಡಿ, ಮಾಧ್ಯಮ ಸಲಹೆಗಾರ ಗಣೇಶ್ ಆಚಾರ್ಯ ಕೊಂಜಾಡಿ, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಆರ್ಡಿ, ಕಾರ್ಯದರ್ಶಿ ಗಣೇಶ್ ಶೆಟ್ಟಿ ಆರ್ಡಿ ಮತ್ತಿತರರು ಪಾಲ್ಗೊಂಡಿದ್ದರು.