ಜಿಲ್ಲೆ

ಶಿಬಿರಾರ್ಥಿಗಳಿಂದ ಸ್ವಚ್ಛತಾ ಸೇವೆ

ಬೆಳ್ತಂಗಡಿ: ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಪ್ರಧಾನಿಯವರ ಅಶಯದಂತೆ ಸ್ವಚ್ಛ ಭಾರತ ನಿರ್ವಾಣದಲ್ಲಿ ಕೈ ಜೊಡಿಸುವ ಸಲುವಾಗಿ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಯೋಚನೆಯಂತೆ ರುಡ್‌ಸೆಟ್ ಸಂಸ್ಥೆಯಿಂದ ಸಿದ್ಧವನದ ಬಸ್ ತಂಗುದಾಣದವರೆಗೆ ಸ್ವಚ್ಚತಾ ಕಾರ್ಯಕ್ರಮ ಶನಿವಾರ ನಡೆಸಿದರು.

ಮೊದಲಿಗೆ ಶಿಬಿರಾರ್ಥಿಗಳಿಗೆ ಈ ವರ್ಷ, ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಮಹತ್ವದ ಬಗ್ಗೆ ತಿಳಿಸಿ ನಂತರ ರಸ್ತೆಯ ಎರಡು ಬದಿಯ ಕಸ ಸ್ವಚ್ಛಗೊಳಿಸಲಾಯಿತು. ಸಂಸ್ಥೆ ನಿರ್ದೇಶಕ ಅಜೇಯ, ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಅನಸೂಯಾ, ಕರುಣಾಕರ ಜೈನ್, ಲೋಹಿತ್ ಜೈನ್, ಉದ್ಯೋಗಿಗಳಾದ ಕಾಶ್ಮೀರ್ ಡಿಸೋಜ, ಪ್ರಸಾದ್, ರಶ್ಮಿ, ಪ್ರವೀಣ್, ಕೂಸಪ್ಪ, ಸುರೇಶ್ ಗೌಡ ಭಾಗವಹಿಸಿದ್ದರು.