ಕಿನ್ನಿಗೋಳಿ: ಸಂಸ್ಥೆ ಹಲವು ವರ್ಷಗಳಿಂದ ಸಾಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು, ಆಶ್ರಮಗಳಿಗೆ ದವಸ ಧಾನ್ಯ, ಸರ್ಕಾರಿ ಶಾಲೆಗಳಿಗೆ ಶೌಚಗೃಹ ಮತ್ತಿತರ ಅಗತ್ಯ ಸೇವೆ ಕೈಗೊಂಡಿದ್ದು, ಎಂಡೋಸಲ್ಫಾನ್ ಬಾಧಿತರಾಗಿ ಹಾಸಿಗೆ ಹಿಡಿದವರಿಗೆ, ಪ್ರತಿ ವರ್ಷ ಆರೋಗ್ಯ ಕಿಟ್‌ಗಳನ್ನು ಅವರ ಮನೆಗಳಿಗೆ ತೆರಳಿ ನೀಡುತ್ತಿದೆ ಎಂದು ಸಂಸ್ಥೆ ಸಿ.ಎಸ್.ಆರ್ ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
ಎಂ.ಆರ್.ಪಿ.ಎಲ್ ಸಂಸ್ಥೆ ಜುಲೈ 1ರಿಂದ 15ರ ವರೆಗೆ ಸ್ವಚ್ಛತಾ ಪಕ್ವಾಡ ಆಚರಿಸುತ್ತಿದ್ದು ಇದರ ಅಂಗವಾಗಿ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ, ಎಂ.ಆರ್.ಪಿ.ಎಲ್‌ನ ಸಿಎಸ್‌ಆರ್ ಉಪಕ್ರಮದಡಿಯಲ್ಲಿ, ದ.ಕ.ದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ಮತ್ತು ವಿಟ್ಲದ ಎಂಡೋಸಲ್ಫಾನ್‌ನಿಂದ ಬಳಲುತ್ತಿರುವವರಿಗೆ ಆರೋಗ್ಯ ಮತ್ತು ಸ್ವಚ್ಛತಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಟ್ಟು 210 ಎಂಡೋಸಲ್ಫಾನ್ ಪೀಡಿತರಿಗೆ ವಿತರಿಸಲಾಯಿತು. ಸಿ.ಎಸ್.ಆರ್ ವಿಭಾಗದ ಮ್ಯಾನೇಜರ್ ಕೇಶವ ಪಾಟೀಲ್, ಆರೋಗ್ಯಾಧಿಕಾರಿಗಳಾದ ಡಾ.ಜೆಸಿಂತಾ ಡಿಸೋಜ, ಡಾ.ದೀಪಕ್ ರೈ, ಸಜುವಿದ್ದೀನ್, ಉಮೇಶ್, ಭವಿಷ್ಯಾ ಉಪಸ್ಥಿತರಿದ್ದರು.