ಜಿಲ್ಲೆ

350 ಕ್ಕೂ ಹೆಚ್ಚು ಕಡೆ ಏಕ ಕಾಲದಲ್ಲಿ ಸ್ವಚ್ಛತೆ

Uttara Kannada - Subash Hegde

ಕಾರವಾರ: ಕೇಂದ್ರ ಸರ್ಕಾರ ಆಯೋಜಿಸಿರುವ ಸ್ವಚ್ಛ ಹೀ ಸೇವಾ ಅಭಿಯಾನದ ಅಂಗವಾಗಿ ಭಾನುವಾರ ಜಿಲ್ಲೆಯ 350 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸುಮಾರು 6 ಟನ್‌ಗೂ ಅಧಿಕ ಕಸ ಸಂಗ್ರಹಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸೂಚನೆಯ ಮೇರೆಗೆ ಬೆಳಗ್ಗೆ 10 ರಿಂದ 11 ರವರೆಗೆ ಪ್ರವಾಸಿ ಕೇಂದ್ರ, ಕಡಲ ತೀರ, ಗ್ರಾಪಂ ಆವರಣ, ಬಸ್ ನಿಲ್ದಾಣ, ಮುಖ್ಯ ರಸ್ತೆ ಮುಂತಾದ 336 ಸಾರ್ವಜನಿಕ ಸ್ಥಳದಲ್ಲಿ ಶ್ರಮದಾನದ ಮೂಲಕ ಕಸ ಸಂಗ್ರಹಿಸಲಾಯಿತು. ಗ್ರಾಪಂ ಅಧ್ಯಕ್ಷ, ಸದಸ್ಯರು, ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು. ಜಿಪಂ ಅಧಿಕಾರಿಗಳು ವಿವಿಧೆಡೆ ಪಾಲ್ಗೊಂಡರು.

ಇದನ್ನೂ ಓದಿ: ಸ್ವಚ್ಚತಾ ಹೀ ಸೇವಾ: ಬಿಬಿಎಂಪಿ ವ್ಯಾಪ್ತಿಯಲ್ಲಿ ಟನ್ ತ್ಯಾಜ್ಯ ಸಂಗ್ರಹ
ಅಲ್ಲದೆ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಅವರವರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡವು. ಕಾರವಾರ ಟ್ಯಾಗೋರ್ ಕಡಲ ತೀರದಲ್ಲಿ ಎನ್‌ಸಿಸಿ, ನೌಕಾಸೇನೆ, ನೆಹರು ಯುವ ಕೇಂದ್ರ ಹಾಗೂ ಇತರ ವಿವಿಧ ಸಂಘಟನೆಗಳು ಸ್ವಚ್ಥತೆ ನಡೆಸಿದವು