ಪುತ್ತೂರು ಗ್ರಾಮಾಂತರ: ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸುವುದೊಂದೇ ಪ್ರಸ್ತುತವಿರುವ ಪರಿಹಾರ ಮಾರ್ಗ ಎಂದು ಗ್ರಾಪಂ ನೋಡಲ್ ಅಧಿಕಾರಿ ವಿಷ್ಣುಪ್ರಸಾದ್ ಹೇಳಿದರು.
ದ ಕ ಜಿಲ್ಲಾ ಪಂಚಾಯಿತಿ ಮಂಗಳೂರು, ಪುತ್ತೂರು ತಾಪಂ, ಗ್ರಾಮೀಣ ಸ್ವಚ್ಛ ಭಾರತ ಮಿಷನ್, ನರಿಮೊಗರು ಗ್ರಾಪಂ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸೆ.17ರಿಂದ ಅ.2ರವರೆಗೆ ನಡೆಯುವ ‘ಸ್ವಚ್ಛತಾ ಹೀ ಸೇವಾ- ಸ್ವಚ್ಛತೆಯೇ ಸೇವೆ’ ಪಾಕ್ಷಿಕದ ‘ಸ್ವಚ್ಛೋತ್ಸವ’ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಬುಧವಾರ ನರಿಮೊಗರು ಗ್ರಾಪಂ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.
ನರಿಮೊಗರು ಗ್ರಾಪಂ ಅಧ್ಯಕ್ಷೆ ಹರಿಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು. ಗ್ರಾಪಂ ಉಪಾಧ್ಯಕ್ಷ ಉಮೇಶ್ ಮಾತನಾಡಿದರು. ಗ್ರಾಪಂ ಸದಸ್ಯರಾದ ನವೀನ್ ರೈ, ತಾರಾನಾಥ, ಪದ್ಮಪ್ಪ, ಪ್ರತಿಮಾ ರೈ, ಮಲ್ಲಿಕಾ ರೈ, ಸುಧೀರ್‌ಕುಮಾರ್, ಪದ್ಮಾವತಿ, ವಸಂತಿ, ಪುಷ್ಪಾವತಿ, ತಾಪಂ ವಿಷಯ ನಿರ್ವಾಹಕರಾದ ಸುರೇಶ್, ರಮೇಶ್, ತುಳಸಿ, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಐಇಸಿ ಸಂಯೋಜಕ ಭರತ್‌ರಾಜ್, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಸೌಮ್ಯಾ, ಎಂಬಿಕೆ ಅನುರಾಧ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ರಸ್ತೆ ಬದಿಗಳಲ್ಲಿ ಅಥವಾ ಸುತ್ತಮುತ್ತಲಿನ ವಾತಾವರಣದಲ್ಲಿ ಬಿದ್ದಿರುವ ಕಸವನ್ನು ಪ್ರತಿ ಬಾರಿ ಪಂಚಾಯಿತಿ ವತಿಯಿಂದ ಶುಚಿಗೊಳಿಸುವುದೊಂದೇ ಸ್ವಚ್ಛತೆ ಅಲ್ಲ. ಸ್ವಚ್ಛತೆ ವಿಚಾರದಲ್ಲಿ ಹಲವಾರು ಬಾರಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದರೂ ಎಲ್ಲೆಂದರಲ್ಲಿ ಕಸ ಸುರಿಯುವುದು ನಿರಂತರವಾಗಿ ನಡೆಯುತ್ತಲೇ ಇದೆ. ವಿಷ್ಣುಪ್ರಸಾದ್, ಗ್ರಾಪಂ ನೋಡಲ್ ಅಧಿಕಾರಿ