ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ವಿಶೇಷ ಸುರಕ್ಷಾ ಪಡೆಯ ಯೋಧ, ಕಾಸರಗೋಡು ಚಿತ್ತಾರಿಕಲ್ ನಿವಾಸಿ ಶಿನ್ಸ್ ಮೋನ್ ತಲಚ್ಚಿರ(45) ರಾಜಸ್ಥಾನದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಚಿತ್ತಾರಿಕ್ಕಲ್ ಮಂಡಪಂ ತಲಚ್ಚಿರ ನಿವಾಸಿ ಮಣಿಕುಟ್ಟಿಗ್ರೇಸಿ ದಂಪತಿ ಪುತ್ರನಾಗಿದ್ದು, ಕೆಲಸ ಬಿಟ್ಟು ವಾಸ ಸ್ಥಳಕ್ಕೆ ವಾಪಸಾಗುವ ವೇಳೆ ದುರಂತ ಸಂಭವಿಸಿದೆ. 23 ವರ್ಷಗಳಿಂದ ಎಸ್.ಪಿ.ಜಿ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಮಣಕ್ಕಡವು ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತದೇಹ ಶುಕ್ರವಾರ ಊರಿಗೆ ತಲುಪಲಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.