ಜಿಲ್ಲೆ

ವಿದ್ಯಾರ್ಥಿಗಳ ಮಧ್ಯ ಘರ್ಷಣೆ

Avinash R

ಉಪ್ಪಳ: ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕ್ರೀಡಾ ಕೂಟದ ವೇಳೆ ಎರಡು ತಂಡ ವಿದ್ಯಾರ್ಥಿಗಳ ಮಧ್ಯ ಘರ್ಷಣೆ ನಡೆದಿದೆ.

ವಿದ್ಯಾರ್ಥಿಯೋರ್ವನನ್ನು ತಂಡವೊಂದು ಕೈಕಂಬ ರಸ್ತೆಯಲ್ಲಿ ಓಡಿಸಿ ಬೆತ್ತದಿಂದ ಹೊಡೆಯುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘರ್ಷಣೆಗೆ ಕಾರಣ ತಿಳಿದು ಬಂದಿಲ್ಲ, ಹೊಡೆದಾಟದ ಬಗ್ಗೆ ದೂರು ನೀಡದಿರುವುದರಿಂದ ಕೇಸು ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.