ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಹೋಲಿ ರಿಡಿಮರ್ ಚರ್ಚ್ ಬೆಳ್ತಂಗಡಿ, ಹೋಲಿ ರಿಡಿಮರ್ ವಾಳೆ, ಪವಿತ್ರ ಶಿಲುಬೆಯ ವಾಳೆ ಹಾಗೂ ಸಂತ ಫ್ರಾನ್ಸಿಸ್ ಕ್ಸೇವಿಯರ್ ವಾಳೆ ಇವುಗಳ ಸಹಯೋಗದೊಂದಿಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸೌಹಾರ್ದ ಕೂಟ ಸವಣಾಲು ಮಂಜದಬೆಟ್ಟಿನಲ್ಲಿ ನಡೆಯಿತು.
ಲಾಯಿಲ ದಯಾ ವಿಶೇಷ ಶಾಲಾ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರನ್ನು ಪ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮವಾಗಿದೆ. ದ್ವೇಷ, ಅಸೂಯೆ ಬಿಟ್ಟರೆ ಮಾನವ ಜನ್ಮ ಪಾವನವಾಗುತ್ತದೆ. ಮಾನವೀಯ ಮೌಲ್ಯವೇ ಶ್ರೇಷ್ಠವಾದದ್ದು ಎಂದರು.
ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ನೋಟರಿ ವಕೀಲ ಮುರಳೀಧರ ಬಲಿಪ, ಸವಣಾಲು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಮಹಮ್ಮದ್ ರಿಯಾಜ್ ಸಹದಿ, ಹೋಲಿ ರಿಡೀಮರ್ ಅಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಫಾ.ಕ್ಲೀಫರ್ಡ್ ಪಿಂಟೋ, ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸಂತ ತೆರೆಸಾ ಕಾನ್ವೆಂಟ್ ಸುಪೀರಿಯರ್ ಸಿ.ಜೆಸಿಂತಾ ಬರೋಟೊ, ಲಾಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಎಂ,ಕೆ , ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಹೋಲಿ ರಿಡೀಮರ್ ವಾಳೆ ಗುರಿಕಾರ ವಿನ್ಸೆಂಟ್ ಲೋಬೊ, ಸಂತ ಫ್ರಾನ್ಸಿಸ್ ವಾಳೆ ಗುರಿಕಾರ ಲಿಲ್ಲಿ ಲೋಬೋ, ಪವಿತ್ರ ಶಿಲುಬೆಯ ವಾಳೆ ಗುರಿಕಾರ ವಿಲ್ಮಾ ಲೋಬೋ, ಗ್ರಾಮಸ್ಥರು, ವಿವಿಧ ಸಮಾಜದ ಗಣ್ಯರು ಉಪಸ್ಥಿತರಿದ್ದರು.ವಿನ್ಸೆಂಟ್ ಲೋಬೊ ಸ್ವಾಗತಿಸಿ, ವಾಲ್ಟರ್ ಮೋನಿಸ್ ಕಾರ್ಯಕ್ರಮ ನಿರೂಪಿಸಿ, ಸರಳಾ ವಂದಿಸಿದರು.