ಜಿಲ್ಲೆ

ಪ್ರಭಾತ್ ಕಲಾವಿದರಿಂದ ಮೇ.5ಕ್ಕೆ ಚಿತ್ತಾಪಹರಣ ಕಾರ್ಯಕ್ರಮ

ಪ್ರಶಾಂತ ರಿಪ್ಪನ್​ಪೇಟೆ

ಬೆಂಗಳೂರು: ಜಯನಗರದ ಜೆಎಸ್‌ಎಸ್ ಆಡಿಟೋರಿಯಂನಲ್ಲಿ ಮೇ.5ಕ್ಕೆ ಚಿತ್ತಾಪಹರಣ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎರಡು ವಿಶಿಷ್ಟ ಕಲಾಪ್ರಕಾರಗಳ ಸಮ್ಮಿಲನವಾಗಲಿದೆ.

ದಿವ್ಯಾ ಪ್ರಭಾತ್ ಅವರಿಂದ ಅಪಹರಣ ಎಂಬ ಏಕವ್ಯಕ್ತಿ ನೃತ್ಯ ನಾಟಕ ಹಾಗೂ ದಾಸಾಚಾರ್ಯ ಶರತ್ ಪ್ರಭಾತ್‌ರವರು ಹರಿಕಥಾ ನಡೆಸಿಕೊಡಲಿದ್ದಾರೆ. ರಾಮ ಮತ್ತು ಕೃಷ್ಣರ ಭಕ್ತಿ ಮೇಳೈಸುವ ಕಾರ್ಯಕ್ರಮವು ಪ್ರೇಕ್ಷಕರ ಮನಸ್ಸನ್ನು ಅಪಹರಣ ಮಾಡಲಿದೆ ಎಂಬುದು ಕಾರ್ಯಕ್ರಮದ ಶೀರ್ಷಿಕೆಯ ಹಿನ್ನೆಲೆ.

ಸಂಜೆ 6.30 ರಿಂದ 8.30ರವರೆಗೆ ನಡೆಯುವ ಕಾರ್ಯಕ್ರಮದ ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ದೊರೆಯಲಿವೆ. ಹೆಚ್ಚಿನ ಮಾಹಿತಿಗೆ ದೂ. 98865 76659 ಸಂಪರ್ಕಿಸಿ.