ಜಿಲ್ಲೆ

ಹಂಗಾರಕಟ್ಟೆ ಶಾಲೆಗೆ ಚಿಣ್ಣರಕೂಟ ಬಾಲವನ ಕೊಡುಗೆ

ಕೋಟ: ಬಾಳ್ಕುದ್ರು ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ಣಾಟಕ ಬ್ಯಾಂಕ್ ನಿವೃತ್ತ ಪಿಆರ್‌ಒ ರಮೇಶ್ ಭಟ್ ತಮ್ಮ ಸಹೋದರಿ ದಿ.ಯಶೋದಾ ಆರ್.ಶಾಸ್ತ್ರಿ ಸ್ಮರಣಾರ್ಥ ಕೊಡುಗೆಯಾಗಿ ನೀಡಿದ ಬಾಲವನ ಚಿಣ್ಣರಕೂಟದ ಲೋಕಾರ್ಪಣೆ ಶುಕ್ರವಾರ ಜರುಗಿತು.

ಅನಸೂಯಾ ಟೀಚರ್ ಕೊಡುಗೆ ಹಸ್ತಾಂತರಿಸಿದರು. ರಮೇಶ್ ಭಟ್ ವಾತನಾಡಿ, ನನ್ನ ಸಹೋದರಿ ದಿ.ಯಶೋಧಾಗೆ ಮಕ್ಕಳೆಂದರೆ ಅತೀವ ಪ್ರೀತಿ. ಮಕ್ಕಳು ಸಂತಸಗೊಂಡರೆ ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಹೀಗಾಗಿ ಸಹೋದರಿ ನೆನಪಿನಲ್ಲಿ ಈ ಕೊಡುಗೆ ನೀಡಿದ್ದಾಗಿ ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ್ ಸಾಮಂತ್, ಲೇಖಕಿ ಮೀನಾಕ್ಷಿ ರಮೇಶ್, ಶತವಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕಷ್ಣ ಉಡುಪ, ಎಸ್.ಡಿ.ಎಂಸಿ.ಅಧ್ಯಕ್ಷ ಸುಭಾಶ್ ಪೂಜಾರಿ, ಉಪಾಧ್ಯಕ್ಷ ರವೀಂದ್ರ ಸುವರ್ಣ, ಮುಖ್ಯ ಶಿಕ್ಷಕಿ ಕುಸುವಾ, ಶಿಕ್ಷಕರಾದ ರಾಧಿಕಾ, ಉಷಾ, ನಾಗರತ್ನಾ, ಯಶೋದಾ, ಸ್ಥಳೀಯರಾದ ಗಣೇಶ್ ಮರಕಾಲ ಮೊದಲಾದವರಿದ್ದರು. ಶಿಕ್ಷಕ ಶ್ರೀಕಾಂತ್ ಸಾಮಂತ್ ನಿರೂಪಿಸಿದರು.