ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆ ಜ್ಞಾನದ ಜತೆಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಸಲುವಾಗಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಯಿತು.  
ಜಿಲ್ಲೆ

ಕೊಕ್ಕರ್ಣೆ ಶಾಲೆಯಲ್ಲಿ ಮಕ್ಕಳ ಸಂತೆ

ಕೊಕ್ಕರ್ಣೆ: ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಸಲುವಾಗಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪಾಲಕರು ಬೆಳೆದ ಬಸಳೆ, ತೊಂಡೆ, ಬೆಂಡೆ, ಹರಿವೆ, ಸೊರೆಕಾಯಿ, ಪಡವಲ, ಬದನೆ, ಗೆಣಸು, ಬಾಳೆ, ಪೇರಳೆ, ಚಿಕ್ಕು, ಲಿಂಬೆ, ಪಪ್ಪಾಯ ಸಹಿತ ವಿವಿಧ ತರಕಾರಿ, ಹಣ್ಣು ಹಾಗೂ ಸೊಪ್ಪುಗಳನ್ನು ತಂದು ಶಾಲಾ ಸಂತೆಯಲ್ಲಿ ಮಾರಾಟ ಮಾಡಿದರು. ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು ಹಣ ಪಾವತಿಸಿ ವಿದ್ಯಾರ್ಥಿಗಳಿಂದ ತರಕಾರಿ, ಹಣ್ಣುಗಳ ಖರೀದಿಸುವ ಮೂಲಕ ವ್ಯವಹಾರಕ್ಕೆ ಸಹಕರಿಸಿದರು.

ವಿದ್ಯಾರ್ಥಿಗಳು ತೂಕ, ಅಳತೆ, ಚಿಲ್ಲರೆ ಕೊಡುವುದು ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ಕಲಿಯಲು ಶಿಕ್ಷಕರು ನೆರವಾದರು. ಈ ವಿನೂತನ ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.